ಮನೆಯ ಮೂಲೆ-ಮೂಲೆಯಲ್ಲೂ ಇರುವೆ ಕಾಟ ಹೆಚ್ಚಾಗಿದ್ಯಾ.. ಹಾಗಿದ್ರೆ ನಾವು ಇಲ್ಲಿ ಹೇಳಲು ಹೊರಟಿರುವ ಟಿಪ್ಸ್ ಫಾಲೋ ಮಾಡಿ.
ಇರುವೆಗಳನ್ನು ಓಡಿಸಲು ಕೆಲವೊಮ್ಮೆ ಕಷ್ಟವಾಗಬಹುದು.
ಅಂತಹ ವೇಳೆ ಇರುವೆಗಳನ್ನು ಓಡಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಇದನ್ನು ಬಳಸುವುದು ಅಪಾಯಕಾರಿ ಆಗಿದೆ. ಇದನ್ನು ತಪ್ಪಿಸಲು ಕೆಮಿಕಲ್ ಮುಕ್ತ ಕೆಲ ಮನೆಮದ್ದನ್ನು ಬಳಸಬಹುದು. ಹಾಗಾದ್ರೆ ಇದಕ್ಕಾಗಿ ಏನು ಮಾಡಬೇಕೆಂದು ನೋಡೋಣ ಬನ್ನಿ.
ನಿಂಬೆ ಸಿಪ್ಪೆ: ಸಮಯಂ ವರದಿ ಪ್ರಕಾರ, ಸಿಟ್ರಸ್ ಆಧಾರಿತ ಹಣ್ಣುಗಳು ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಇದಕ್ಕಾಗಿ ಕಿತ್ತಳೆ, ನಿಂಬೆ ಮುಂತಾದ ಹಣ್ಣುಗಳ ಸಿಪ್ಪೆಯನ್ನು ತೆಳುವಾಗಿ ಕತ್ತರಿಸಿ ಇರುವೆಗಳು ಓಡಾಡುವ ಜಾಗದಲ್ಲಿ ಇಡಿ. ಇದು ಇರುವೆಗಳನ್ನು ದೂರ ಇಡುತ್ತದೆ. ಸಿಟ್ರಸ್ ಹಣ್ಣುಗಳ ಸಿಪ್ಪೆಯ ದ್ರವವು ಇರುವೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಹೀಗೆ ಮಾಡಲು ನಿಂಬೆ ಸಿಪ್ಪೆಯನ್ನು ತೆಳುವಾಗಿ ಕತ್ತರಿಸಿ ಕಾಲು ಕಪ್ ಬೆಚ್ಚಗಿನ ನೀರನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಇದನ್ನು ಸೋಸಿಕೊಂಡು ಇರುವೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ.
ಮೆಣಸು: ಮೆಣಸಿನಕಾಯಿಯಂತಹ ಪದಾರ್ಥಗಳು ಇರುವೆಗಳನ್ನು ಹಿಮ್ಮೆಟ್ಟಿಸುವ ಗುಣವನ್ನು ಹೊಂದಿವೆ. ಹಾಗಾಗಿ ಇರುವೆಗಳು ಓಡಾಡುವ ಜಾಗದಲ್ಲಿ ಕೆಂಪು ಮೆಣಸಿನಕಾಯಿ ಮತ್ತು ಕರಿಮೆಣಸು ಹಾಕಿ. ಇವುಗಳಿಂದ ಇರುವೆಗಳು ಹೋಗುತ್ತವೆ.
ಬೇವಿನ ಎಣ್ಣೆ: ಬೇವಿನ ಎಣ್ಣೆ ಕೂಡ ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಇದಕ್ಕಾಗಿ ನಿಮಗೆ ಸ್ವಲ್ಪ ಕ್ಯಾಸ್ಟೈಲ್ ಸೋಪ್, ಬೇವಿನ ಎಣ್ಣೆ, ನೀರು ಮತ್ತು ಸ್ಪ್ರೇ ಬಾಟಲಿಯ ಅಗತ್ಯವಿದೆ. ಮೊದಲು ಸ್ಪ್ರೇ ಬಾಟಲಿಗೆ 1 1/4 ಕಪ್ ನೀರು ತುಂಬಿಸಿ ಮತ್ತು ಕ್ಯಾಸ್ಟೈಲ್ ಸೋಪ್ ಸೇರಿಸಿ. ಇದಕ್ಕೆ 1 ಚಮಚ ಬೇವಿನ ಎಣ್ಣೆಯನ್ನು ಸೇರಿಸಿ. ಬಾಟಲಿಯನ್ನು ಮುಚ್ಚಿ ಮತ್ತು ಎಲ್ಲವನ್ನೂ ಅಲ್ಲಾಡಿಸಿ. ಇರುವೆಗಳು ಓಡಾಡುವ ಜಾಗದಲ್ಲಿ ಈ ಸ್ಪ್ರೇ ಸಿಂಪಡಿಸಿ. ಕಾಫಿ ಬೀನ್ಸ್: ಕಾಫಿ ಬೀಜಗಳು ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಕಾಫಿಯ ವಾಸನೆ ಇರುವೆಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಇರುವೆಗಳು ಓಡಾಡುವ ಜಾಗದಲ್ಲಿ ಕಾಫಿ ಪುಡಿಯನ್ನು ಉದುರಿಸಿ. ಇದು ಇರುವೆಗಳನ್ನು ದೂರವಿಡುತ್ತದೆ.
ವಿನೆಗರ್: ವಿನೆಗರ್ ಅಸಿಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಅದಕ್ಕಾಗಿ ಇರುವೆಗಳು ಓಡಾಡುವ ಜಾಗದಲ್ಲಿ ವಿನೆಗರ್ ಸಿಂಪಡಿಸಿ. ನಂತರ ಆ ಪ್ರದೇಶವನ್ನು ಒರೆಸಿ. ಇದರಿಂದ ಇರುವೆಗಳು ಕಡಿಮೆಯಾಗುತ್ತವೆ.
ಅಡಿಗೆ ಸೋಡಾ: ಬೇಕಿಂಗ್ ಸೋಡಾ ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಇದರಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ. ಆದ್ದರಿಂದ, ಇದನ್ನು ಯಾವುದೇ ಚಿಂತೆ ಇಲ್ಲದೇ ಬಳಸಬಹುದು. ಇದಕ್ಕಾಗಿ, ಅಡಿಗೆ ಸೋಡಾಕ್ಕೆ ಸಮಾನ ಪ್ರಮಾಣದ ಸಕ್ಕರೆ ಸೇರಿಸಿ. ಇರುವೆಗಳು ಸಾಮಾನ್ಯವಾಗಿ ಈ ಜಾಗಗಳಲ್ಲಿ ಇರುವುದಿಲ್ಲ. ಇದರಿಂದ ಇರುವೆಗಳನ್ನು ದೂರ ಇಡಬಹು
ದಾಲ್ಚಿನ್ನಿ: ನಮಗೆ ದಾಲ್ಚಿನ್ನಿ ವಾಸನೆ ಇಷ್ಟವಾಗುತ್ತದೆ. ಆದರೆ ಇರುವೆಗಳು ಇದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಇರುವೆ ಗೂಡುಗಳ ಬಳಿ ದಾಲ್ಚಿನ್ನಿ ಪುಡಿಯನ್ನು ಹಾಕಿದರೆ ಅವು ಬೇರೆಡೆ ಹೋಗುತ್ತವೆ. ಇಲ್ಲದಿದ್ದರೆ ದಾಲ್ಚಿನ್ನಿ ಎಣ್ಣೆಯ ಬಾಟಲಿಯನ್ನು ಖರೀದಿಸಿ, ಅದರ ಕೆಲವು ಹನಿಗಳನ್ನು ನೀರಿಗೆ ಮಿಕ್ಸ್ ಮಾಡಿ ಇರುವೆಗಳು ಬರುವ ಜಾಗದಲ್ಲಿ ಚಿಮುಕಿಸಿ. ಇದರಿಂದ ಇರುವೆಗಳು ಇನ್ನು ಮುಂದೆ ಬರುವುದಿಲ್ಲ. ಹಾಗೆಯೇ ಕಿಟಕಿ, ಬಾಗಿಲುಗಳ ಮೂಲೆಗಳಲ್ಲಿ ದಾಲ್ಚಿನ್ನಿ ಇಟ್ಟರೆ, ಇರುವೆಯಷ್ಟೇ ಅಲ್ಲ ಮತ್ತಿತರ ಕೀಟಗಳು ಬರುವುದಿಲ್ಲ