3 ಕೋಟಿ ಆಸೆ ತೋರಿಸಿ ಉದ್ಯಮಿಯೊಬ್ಬರಿಂದ 61.58 ಹಣವನ್ನು ಸೈಬರ್ ಕಳ್ಳರು ವಂಚಿಸಿರುವ ಘಟನೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನಲ್ಲಿ ಜರುಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ 3 ಕೋಟಿ ಲಾಭ ಗಳಿಸಬಹುದು ಎಂದು ನಂಬಿಸಿ ಮೋಸ ಮಾಡಲಾಗಿದೆ, ಅಮ್ಮಸಂದ್ರದ ಎಚ್.ಆರ್.ರೇಣುಕಪ್ರಸಾದ್ ಎಂಬ ಉದ್ಯಮಿಗೆ ವಂಚನೆ ಮಾಡಲಾಗಿದೆ.
ಸೈಬರ್ ಕಳ್ಳರ ಬಲೆಗೆ ಬಿದ್ದು ರೇಣುಕಾಪ್ರಸಾದ್ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವಿಡಿಯೊ ನೋಡಿ ವಂಚಕರ ಜೊತೆ ರೇಣುಕಾಪ್ರಸಾದ್ ವಾಟ್ಸಾಪ್ ಚಾಟ್ ಮಾಡಿದ್ದ. ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟಿಸ್’ ನಲ್ಲಿ ಬಂಡವಾಳ ಹೂಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಕಳ್ಳರು ಆಮಿಷ ಒಡ್ಡಿದ್ದಾರೆ.
ವಂಚಕರ ಮಾತು ನಂಬಿ ಮೊದಲಿಗೆ 50 ಸಾವಿರ ಹಣವನ್ನ ವಂಚಕರ ಖಾತೆಗೆ ರೇಣುಕಾಪ್ರಸಾದ್ ವರ್ಗಾಯಿಸಿದ್ದಾರೆ. ಹೀಗೆ ಹಣ ಡಬ್ಬಲ್ ಆಗುತ್ತೆ ಎಂಬ ಆಸೆಯಿಂದ 61,58,500 ವರ್ಗಾವಣೆ ಮಾಡಿದ್ದ. ಮೋಸ