ಬೆಳ್ಳಂಬೆಳಿಗ್ಗೆ ಮದ್ದೂರಿಗೆ ಕಾಡಾನೆ ಹಿಂಡು ಎಂಟ್ರಿ ಕೊಟ್ಟಿದೆ. ಮಂಡ್ಯದ ಮದ್ದೂರು ಪಟ್ಟಣದಲ್ಲಿರುವ ಹೊಳೆ ಆಂಜನೇಯ ದೇಗುಲದ ಬಳಿ ಕಾಡಾನೆಗಳು ಪ್ರತ್ಯಕ್ಷವಾಗಿದೆ.
ಇಂದು ಬೆಳ್ಳಂ ಬೆಳಿಗ್ಗೆ 6 ಆನೆಗಳು ಕಾಣಿಸಿಕೊಂಡಿವೆ.
ಸಾರ್ವಜನಿಕರಿಗೆ, ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ರಾಮನಗರದ ಕಾವೇರಿ ವನ್ಯಧಾನದ ಕಡೆಯಿಂದ ಮದ್ದೂರಿಗೆ ಗಜಪಡೆ ಬಂದಿದೆ. ಸಂಜೆ ಬಳಿಕ ಕಾಡಾನೆಗಳನ್ನ ಕಾಡಿಗಟ್ಟಲು ಅರಣ್ಯ ಇಲಾಖೆ ಪ್ಲಾನ್ ಮಾಡಿದೆ.