ಕನ್ನಡದ ನಟಿ, ಕರಾವಳಿ ಬ್ಯೂಟಿ ನೇಹಾ ಶೆಟ್ಟಿ ಸದ್ಯ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಡಿಜೆ ಟಿಲ್ಲು’ ನಂತರ ಇದೀಗ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ, ತಮ್ಮ ಬಗೆಗಿನ ಟ್ರೋಲ್ಗಳ ಕುರಿತು ನೇಹಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ ತಾವು ಟ್ರೋಲ್ಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ. ಜಗತ್ತಿನಲ್ಲಿ ಜನರು ತಮ್ಮದೇ ಆದ ವಿವಿಧ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ನಾನು ತಿಳಿದಿದ್ದೇನೆ. ಬೇರೆಯವರ ಅಭಿಪ್ರಾಯಗಳು ನನ್ನ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಹಾಗಾಗಿ ನನಗೆ ಸಂಬಂಧಿಸಿದ ಟ್ರೋಲ್, ಸುದ್ದಿಗಳನ್ನು ನಾನು ನೋಡುವುದಿಲ್ಲ. ಅಲ್ಲಿ ಪಾಸಿಟಿವ್ಗಿಂತ ನೆಗೆಟಿವ್ ವಿಚಾರಗಳು ಹೆಚ್ಚಾಗಿರುತ್ತದೆ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ.
ಗಣೇಶ್ ನಟನೆಯ ಮುಂಗಾರುಮಳೆ 2 ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ನೇಹಾ ಶೆಟ್ಟಿ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದ್ದಾರೆ.