ವಿಸಿ ನಾಲೆ ಕಾಮಗಾರಿ ವಿಳಂಬದಿಂದ ಬಿಜೆಪಿ ಹೋರಾಟದ ವಿಚಾರವಾಗಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ವಿಸಿ ನಾಲೆ ಕಾಮಗಾರಿಗಾಗಿ ರೈತರಿಗೆ ತೊಂದರೆ ಕೊಡುವ ಪ್ರಶ್ನೆ ಇಲ್ಲ.
ಹೊಸ ಟೆಕ್ನಾಲಜಿ ಬಳಸಿ ನಾಲೆ ಕಾಮಗಾರಿ ಕಾರ್ಯ ನಡೆಯುತ್ತಿದೆ. ಬಿಜೆಪಿಯವರು ಕಂಪ್ಲೇಂಟ್ ಕೊಡ್ಲಿ ತನಿಖೆ ಮಾಡ್ಸೋಣಾ. ಅವರ ಕಾಲದಲ್ಲಿ ಅಪ್ರೂವಲ್ ಆಗಿರೋದು. ಡ್ರೈಲ್ಯಾಂಡ್ ಗೆ ನೀರು ಕೊಡುವ ದೃಷ್ಟಿಯಿಂದ ನಾವು ಮಾಡಿದ್ದೇವೆ. ರೈತರಿಗೆ ಉಪಯೋಗ ಆಗಬೇಕು, ಆದ್ರೆ ಅವರು ಕಂಪ್ಲೇಂಟ್ ಕೊಡ್ಲಿ. ನನಗೆ ಕೊಡ್ತಾರೋ, ಇಲಾಖೆಗೆ ಕೊಡ್ತಾರೋ ಸಮರ್ಪಕವಾಗಿ ಮಾಡೋಣ. ಕ್ಯೂರಿಂಗ್ ಮಾಡದಂತ ಟೆಕ್ನಾಲಜಿ ಬಂದಿದೆ ಅದನ್ನ ಬಳಸಿ ಕೆಲಸ ಹಾಗ್ತಿದೆ. ಉತ್ತಮವಾಗಿ ಕೆಲಸ ಆಗ್ತಿದೆ. ಬಿಜೆಪಿಯವರು ಕಂಪ್ಲೇಂಟ್ ಕೊಡಲಿ ತನಿಖೆ ಮಾಡೋಣ.
ಅವರು ಹೇಳಿದ ಇಂಜಿನಿಯರ್ ಅತ್ರನೇ ತನಿಖೆ ಮಾಡ್ಸೋಣ. ಕೆಲಸದಿಂದ ನೀರನ್ನ ನಿಲ್ಲಿಸಲ್ಲ. ಡ್ಯಾಂ ನಲ್ಲಿ ಸಂಗ್ರಹವಾದ ತಕ್ಷಣವೇ ರೈತರ ಬೆಳೆಗೆ ಬೇಕಾಗುವ ಸಂದರ್ಭದಲ್ಲಿ ಬಿಡ್ತೇವೆ. ಕೆಲಸ ನಿಲ್ಲಿಸಿ, ಮುಂದೆ ನೀರು ನಿಲ್ಲಿಸಿದ ಮೇಲೆ ಮತ್ತೆ ಕೆಲಸ ಆರಂಭವಾಗಿದೆ. ಕೆಲಸ ಮಾಡೋಕೋಸ್ಕರ ರೈತರಿಗೆ ತೊಂದರೆ ಕೊಡುವ ಪ್ರಶ್ನೆ ಇಲ್ಲ
ಬಿಜೆಪಿಯವರು ಕಂಪ್ಲೇಂಟ್ ಕೊಡಲಿ ಧನ್ಯವಾದಗಳು ಅವರಿಗೆ ಎಂದಿದ್ದಾರೆ.