ತಮ್ಮ ಹೊಟ್ಟೆಯ ಬೊಜ್ಜು ಕರಗಿಸಲು ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ತೊಡೆಯ ಸ್ನಾಯುವನ್ನು ಕಡಿಮೆ ಮಾಡಲು, ತೋಳಿನ ಸ್ನಾಯುವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯನ್ನು ಕಡಿಮೆ ಮಾಡಲು ವಿವಿಧ ವ್ಯಾಯಾಮಗಳಿವೆ.
ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು ಕೆಜಿಗಳಷ್ಟು ಮಾತ್ರವೇ ಇಳಿದು ನಿರಾಸೆಗೊಳ್ಳುತ್ತಾರೆ.
ಇದಲ್ಲದೇ ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಹೀಗಾಗಿ ನಾವಿಂದು ತಿಳಿಸುವ ಕೆಲ ನೆಲದ ಮೇಲೆ ಮಾಡಬಹುದಾದ ವ್ಯಾಯಾಮಗಳನ್ನು ಪ್ರತಿದಿನ ತಪ್ಪದೇ ಮಾಡುವ ಮೂಲಕ ಸುಲಭವಾಗಿ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಬಹುದು.
ಕಿಬ್ಬೊಟ್ಟೆಯ ಮತ್ತು ತೋಳಿನ ಸ್ನಾಯುಗಳನ್ನು ಟೋನ್ ಮಾಡಲು ಈ ವ್ಯಾಯಾಮಗಳನ್ನು ಮಾಡಬಹುದು. ಇದನ್ನು ಮಾಡಲು ಮೊದಲು ನೆಲದ ಮೇಲೆ ಕುಳಿತುಕೊಳ್ಳಿ. ನಂತರ ಪಾದಗಳನ್ನು ನೆಲದ ಮೇಲೆ ಇಡದೇ, ಕೈಗಳನ್ನು ಎರಡೂ ಬದಿಗೆ ತಿರುಗಿಸಬೇಕು.
ಪ್ಲ್ಯಾಂಕ್: ಇದು ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುವ ವ್ಯಾಯಾಮಗಳಲ್ಲಿ ಒಂದಾಗಿದೆ. ಈ ವ್ಯಾಯಾಮಗಳು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಮತ್ತು ಭುಜಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಲೆಗ್ ರೈಸಸ್: ಈ ವ್ಯಾಯಾಮವನ್ನು ಮಲಗಿಯೂ ಮಾಡಬಹುದು. ಇದು ಕಿಬ್ಬೊಟ್ಟೆಯ ಪ್ರದೇಶದಲ್ಲಿ ಸ್ನಾಯುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಗ್ಗೆ, 90 ಡಿಗ್ರಿಗಳಷ್ಟು ಮೇಲಕ್ಕೆತ್ತಿ ಮತ್ತು ಏನನ್ನೂ ಹಿಡಿದಿಟ್ಟುಕೊಳ್ಳದೇ ನಿಮ್ಮ ಕೆಳ ಹೊಟ್ಟೆಯ ಮೇಲೆ ಒತ್ತಿರಿ.
ಕ್ರಂಚಸ್: ಕ್ರಂಚಸ್ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುವ ವ್ಯಾಯಾಮಗಳಲ್ಲಿ ಒಂದಾಗಿದೆ. ಇದರಲ್ಲಿ ಹಲವು ವಿಧಗಳಿವೆ. ಆಂತರಿಕ ಸ್ನಾಯುಗಳ ಮೇಲೆ ಕೇಂದ್ರೀಕರಿಸುವುದು ಈ ವ್ಯಾಯಾಮ.
ಬೈಸಿಕಲ್ ಕ್ರಂಚಸ್: ಅತ್ಯುತ್ತಮ ಮಧ್ಯ-ದೇಹ ಸ್ಲಿಮ್ಮಿಂಗ್ ವ್ಯಾಯಾಮವೆಂದರೆ ಬೈಸಿಕಲ್ ಕ್ರಂಚಸ್. ಕಾಲುಗಳು, ತೋಳುಗಳು ಮತ್ತು ಸೊಂಟದ ಎರಡೂ ಬದಿಗಳು ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಕ್ರಾಪ್ ವಾಕ್: ಇದು ಫುಲ್ ಬಾಡಿ ವರ್ಕೌಟ್. ದೇಹವನ್ನು ಸುಲಭವಾಗಿ ಇರಿಸಿಕೊಳ್ಳಲು ಈ ವ್ಯಾಯಾಮಗಳನ್ನು ಮಾಡಬಹುದು. ಇದು ಭುಜವನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ.