ಪಪುವಾ ನ್ಯೂಗಿನಿ ದೇಶದ ಉತ್ತರ ಭಾಗದಲ್ಲಿರುವ ಹಳ್ಳಿಯೊಂದರಲ್ಲಿ ಸಂಭವಿಸಿದ ಭೂಕುಸಿತದಲ್ಲಿ 2,000 ಕ್ಕೂ ಹೆಚ್ಚು ಜನರು ಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂಗಿನಿ ರಾಷ್ಟ್ರೀಯ ವಿಪತ್ತು ಕೇಂದ್ರ ತಿಳಿಸಿದೆ.
“ಭೂಕುಸಿತವು 2,000 ಕ್ಕೂ ಹೆಚ್ಚು ಜನರನ್ನು ಜೀವಂತವಾಗಿ ಸಮಾಧಿ ಮಾಡಿದ್ದು, ಕಟ್ಟಡಗಳು, ಆಹಾರ ತೋಟಗಳು ವ್ಯಾಪಕ ನಾಶಕ್ಕೆ ಗುರಿಯಾಗಿದೆ. ಈ ದುರ್ಘಟನೆಯಿಂದಾಗಿ ದೇಶದ ಆರ್ಥಿಕ ಜೀವನಾಧಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ” ಎಂದು ರಾಷ್ಟ್ರೀಯ ವಿಪತ್ತು ಕೇಂದ್ರದ ಅಧಿಕಾರಿಯೊಬ್ಬರು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.