ಬೆಂಗಳೂರು: ತವರು ಮನೆಯಿಂದ ವರದಕ್ಷಿಣೆ ತರದಿದ್ದಕ್ಕೆ ಪತ್ನಿಗೆ ಪತಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರ್.ಟಿ.ನಗರದ ವಜೀರ್ ಅಹಮದ್ ಎಂಬಾತ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಮನೆಯಿಂದ ವರದಕ್ಷಿಣೆ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ರ್ಯಾಡೋ ವಾಚ್ ತರದಿದ್ದಕ್ಕೆ ಪತ್ನಿ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ.
ಕಳೆದ ಮೂರು ವರ್ಷಗಳ ಹಿಂದೆ ದುಬೈನಲ್ಲಿ ಕೆಲಸಕ್ಕೆ ಸೇರ್ತೀನಿ ಎಂದು ಹೇಳಿ ವಂಚಿಸಿ ಸಂತ್ರಸ್ಥೆಯನ್ನ ಮದುವೆಯಾಗಿದ್ದ ಆರೋಪಿ ವಜೀರ್,
ಮದುವೆ ನಂತರ ಯಾವುದೇ ಕೆಲಸ ಮಾಡದೆ ಓಡಾಡಿಕೊಂಡಿದ್ದ. ಪತ್ನಿಗೆ ತಂದೆ ಮನೆಯಿಂದ ರ್ಯಾಡೋ ವಾಚ್, ಹಣ ಸೇರಿ ಪ್ರತಿ ಹಬ್ಬಕ್ಕೆ ವರದಕ್ಷಿಣೆಗೆ ಡಿಮ್ಯಾಂಡ್ ಮಾಡುತ್ತಿದ್ದ. ಅಲ್ಲದೇ ವಜೀರ್ ನನಗೆ ತಿಳಿಯದಂತೆ ನಾಲ್ಕೈದು ಮದುವೆ ಆಗಿದ್ದಾನೆ. ಈ ಬಗ್ಗೆ ನಾನು ಪ್ರಶ್ನಿಸಿದಾಗ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ಕಣ್ಣೀರು ಹಾಕಿದ್ದಾರೆ. ಸದ್ಯ ಸಂತ್ರಸ್ತ ಪತ್ನಿಯಿಂದ ಪತಿ ವಜೀರ್ ಹಾಗೂ ಕುಟುಂಬಸ್ಥರ ವಿರುದ್ದ ಆರ್.ಟಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನನ್ವಯ ಐಪಿಸಿ 498A ವರದಕ್ಷಿಣೆ ಕಿರುಕುಳ, 506 ಜೀವಬೆದರಿಕೆ, 323 ಮಾರಣಾಂತಿಕ ಹಲ್ಲೆಯಡಿ ದೂರು ದಾಖಲಿಸಲಾಗಿದೆ.