ಯಾವುದೇ ಮನೆಯ ಬಾತ್ರೂಂಗಳಲ್ಲಿ ಮೌತ್ ವಾಷ್ಖಾಯಂ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬಣ್ಣದ ಬಾಟಲಿಗಳ ಮೇಲಿನ ಮೋಹವನ್ನೋ ಅಥವಾ ಜಾಹೀರಾತುಗಳ ಭರವಸೆಯನ್ನೋ ಒಂದೆಡೆ ಇಟ್ಟು, ಮೌತ್ವಾಷ್ ಬಳಕೆ ಇತಿ-ಮಿತಿಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
ಬಾಯಿಯ ದುರ್ಗಂಧ ಎಷ್ಟೋ ಸಂದರ್ಭಗಳಲ್ಲಿ ಮುಜುಗರ ತರುವಂತಹದ್ದು. ಸಾಮಾಜಿಕ, ವೈಯಕ್ತಿಕ ಅಥವಾ ವೃತ್ತಿಯ ಸಂದರ್ಭಗಗಳಲ್ಲಿ ಇದನ್ನು ನಿಭಾಯಿಸುವುದು ಕಷ್ಟವಾಗಬಹುದು. ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು, ಜೀರ್ಣಾಂಗಗಳ ಆರೋಗ್ಯ ನಿಭಾಯಿಸುವುದು, ಆಗಾಗ ನೀರು ಕುಡಿಯುವುದು- ಇಂಥವೆಲ್ಲ ಬಾಯಿಯ ದುರ್ಗಂಧ ನಿವಾರಣೆಯಲ್ಲಿ ಮುಖ್ಯವಾದವು. ಜೊತೆಗೆ ಮೌತ್ವಾಷ್ ಬಳಕೆ ಸಹ ಈ ಸಮಸ್ಯೆಗೆ ಸಮರ್ಥ ಪರಿಹಾರವನ್ನು ಒದಗಿಸಬಲ್ಲದು
ಕೆಲವು ಮೌತ್ವಾಷ್ಗಳು ಬ್ಯಾಕ್ಟೀರಿಯ ವಿರೋಧಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥವುಗಳ ನಿಯಮಿತ ಬಳಕೆಯಿಂದ ಒಸಡಿನ ಸೋಂಕುಗಳನ್ನು ಮಟ್ಟ ಹಾಕಬಹುದು. ಪ್ಲೇಕ್ಗಳು ನಿರ್ಮಾಣವಾಗಿ ಒಸಡಿನ ಆರೋಗ್ಯಕ್ಕೆ ಸವಾಲೊಡ್ಡುವ ಸಾಧ್ಯತೆ ಇರುತ್ತದೆ. ಇವುಗಳಿಗೂ ಕೆಲವು ಮೌತ್ವಾಷ್ಗಳು ಪರಿಹಾರ ಒದಗಿಸಬಲ್ಲವು
ಕೆಲವು ಮೌತ್ವಾಷ್ಗಳು ಪರಿಹಾರ ಒದಗಿಸಬಲ್ಲವು
ಮನೆಯಲ್ಲಿದ್ದರೂ, ಪ್ರಯಾಣದಲ್ಲಿದ್ದರೂ ಇವುಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದು ಸುಲಭ. ಫ್ಲೋಸಿಂಗ್ನಂಥ ಕ್ರಮಗಳು ಸಮಯ ಬೇಡುತ್ತವೆ. ಮಾತ್ರವಲ್ಲ, ವಿಮಾನದಲ್ಲಿ, ಟ್ರೇನ್ನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಮಾಡಲೂ ಸಾಧ್ಯವಿಲ್ಲ. ಆದರೆ ಮೌತ್ವಾಷ್ ಬಳಕೆಗೆ ಅಂಥ ಯಾವುದೇ ಅಡೆ-ತಡೆಗಳಿಲ್ಲ; ಇದರ ಬಳಕೆ ಅತಿ ಸುಲಭ
ಫ್ಲೂರೈಡ್ ಹೊಂದಿರುವ ಮೌತ್ವಾಷ್ಗಳು ಬಾಯಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ದಂತಗಳ ಎನಾಮಲ್ ರಕ್ಷಣೆ ಮಾಡಿ, ಒಡಸುಗಳನ್ನು ಸುರಕ್ಷಿತವಾಗಿ ಇರಿಸಿ, ಹಲ್ಲುಗಳ ಬೇರನ್ನು ಭದ್ರ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಹಲ್ಲುಗಳು ಹುಳುಕಾಗಿ, ಕುಳಿಯಾಗದಂತೆ ರಕ್ಷಣೆ ನೀಡುತ್ತವೆ. ಒಟ್ಟಾರೆಯಾಗಿ ಬಾಯಿಯ ಆರೋಗ್ಯಕ್ಕೆ ಇದೊಂದು ಒಳ್ಳೆಯ ಆಯ್ಕೆ.
ಹಾಗೆಂದು ಮೌತ್ವಾಷ್ ಬಳಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲವೇ? ಅದನ್ನು ಬಳಸಿದಾಗ ಆಗುವುದೆಲ್ಲ ಒಳ್ಳೆಯದು ಎಂದು ತೀರ್ಮಾನಿಸಲು
ಸಾಧ್ಯವೇ? ಎಂದು ಕೇಳಿದರೆ, ಹಾಗೇನಿಲ್ಲ. ಅದರಲ್ಲೂ ಸಮಸ್ಯೆಗಳು ಇಲ್ಲದಿಲ್ಲ. ಬಾಯಿಯ ಸರ್ವರೋಗಗಳಿಗೆ ಇದೊಂದೇ ಮದ್ದು ಎಂದು ಖಂಡಿತಕ್ಕೂ ಭಾವಿಸುವಂತಿಲ್ಲ. ಹಾಗಾದರೆ ಮೌತ್ವಾಷ್ ಬಳಸುವುದರಲ್ಲಿ ಇರುವಂಥ ಸಮಸ್ಯೆಗಳೇನು? ಯಾವುದರ ಬಗ್ಗೆ ಗಮನ ನೀಡಬೇಕು ಇದನ್ನು ಬಳಸುವಾಗ
ಬಹಳಷ್ಟು ಮೌತ್ವಾಷ್ಗಳು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತವೆ. ಇದು ಬಾಯಿ ಒಣಗಿದಂತೆ ಮಾಡಿ, ಕಿರಿಕಿರಿ ಉಂಟುಮಾಡಬಹುದು. ದೀರ್ಘಕಾಲ ಇಂಥ ಮೌತ್ವಾಷ್ ಬಳಸುವುದರಿಂದ, ಈ ಸಮಸ್ಯೆಗಳು ಹೆಚ್ಚುತ್ತವೆ. ಹಾಗಾಗಿ ಸೂಕ್ಷ್ಮ ಒಸಡುಗಳು ಇರುವವರಿಗೆ ಮತ್ತು ಗರ್ಭಿಣಿಯರಿಗೆ ಆಲ್ಕೋಹಾಲ್ ಇಲ್ಲದಂಥ ಮೌತ್ವಾಷ್ ಬಳಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ
ಬಾಯಿಯ ದುರ್ಗಂಧದ ಸಮಸ್ಯೆಗಳನ್ನು ಮೌತ್ವಾಷ್ಗಳು ತಡೆಯುವುದು ಹೌದಾದರೂ ಅದು ತಾತ್ಕಾಲಿಕ. ಬಾಯಿಯ ದುರ್ಗಂಧಕ್ಕೆ ಮೂಲ ಕಾರಣವೇನು ಎಂಬುದನ್ನು ಹುಡುಕಿ, ಅದನ್ನು
ಪರಿಹರಿಸಿಕೊಳ್ಳುವುದು ಮುಖ್ಯ. ಹಲ್ಲುಗಳು ಹುಳುಕಾಗಿವೆಯೇ ಅಥವಾ ಜೀರ್ಣಾಂಗಗಳ ಸಮಸ್ಯೆಯಿಂದ ಹೀಗಾಗುತ್ತಿದೆಯೇ- ಅಂತೂ ಕಾರಣವೇನು ಎಂಬುದನ್ನು ಪತ್ತೆ ಮಾಡುವುದು ಅಗತ್ಯ. ಹಾಗಾಗಿ ಸಮಸ್ಯೆಗಳನ್ನು ಮೌತ್ವಾಷ್ ತಾತ್ಕಾಲಿಕವಾಗಿ ಮಾತ್ರವೇ ನಿವಾರಣೆ ಮಾಡಬಲ್ಲದು.
ಮೌತ್ವಾಷ್ಗಳ ಬಳಕೆಯ ನೆವದಿಂದ ನಿತ್ಯದ ಸ್ವಚ್ಛತೆಯ ಅಭ್ಯಾಸಗಳನ್ನು ಬಿಡುವಂತಿಲ್ಲ. ಅಂದರೆ ನಿಯಮಿತವಾಗಿ ಬ್ರಷ್ ಮಾಡುವುದು, ಫ್ಲೋಸ್ ಮಾಡುವುದು, ಊಟ-ತಿಂಡಿಯ ನಂತರ ಬಾಯಿಗೆ ನೀರು ಹಾಕಿ ಮುಕ್ಕಳಿಸುವುದು- ಇವೆಲ್ಲ ಅಗತ್ಯ ಅಭ್ಯಾಸಗಳು. ಎಂದೋ ಪ್ರಯಾಣದ ಸಂದರ್ಭದಲ್ಲಿ ಬ್ರಷ್ ಮಾಡುವುದಕ್ಕೆ ಅನುಕೂಲವಿಲ್ಲ ಎನ್ನುವಾಗ ಮಾತ್ರವೇ ಮೌತ್ವಾಷ್ ಬಳಕೆಯನ್ನು ಪರ್ಯಾಯ ಆಗಿಸಿಕೊಳ್ಳಬಹುದೇ ಹೊರತು, ಸದಾ ಅಲ್ಲ