ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾದಲ್ಲಿ ಮಿಂಚಿದ್ದ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಖ್ಯಾತಿ ಪಡೆದಿರುವ ನಟಿ ಅಮಲಾ ಪೌಲ್ ತುಂಬು ಗರ್ಭಿಣಿಯಾಗಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಜಗತ್ ದೇಸಾಯಿ ಎಂಬುವರನ್ನು ಎರಡನೇ ಮದುವೆಯಾದ ಅಮಲಾ ಪೌಲ್ ಈ ವರ್ಷಾರಂಭದಲ್ಲಿ ತಾವು ತಾಯಿ ಆಗುತ್ತಿರುವ ಸಂತಸವನ್ನ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಈ ಹಿಂದೆ ನಟಿ ಅಮಲಾ ಪೌಲ್ ನಿರ್ದೇಶಕ ಎಎಲ್ ವಿಜಯ್ ಅವರನ್ನು 12 ಜೂನ್ 2014 ರಂದು ಮದುವೆಯಾಗಿದ್ದರು. ಆದರೆ ಅವರ ಮದುವೆ ಕೇವಲ ಮೂರು ವರ್ಷಗಳ ಕಾಲ ಉಳಿಯಿತು. ಕೆಲ ಕಾರಣಗಳಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಬಳಿಕ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು, ಆ ಬಳಿಕ ಜಗತ್ ಅವರನ್ನು ಅಮಲಾ ಮದುವೆಯಾದರು.
ಜಗತ್ ದೇಸಾಯಿ ಅವರನ್ನು ಮದುವೆಯಾದ 2 ತಿಂಗಳಿಗೆ ನಟಿ ಅಮಲಾ ಪೌಲ್ ತಾನು ಗರ್ಭಿಣಿ ಎನ್ನುವ ಸಿಹಿ ಸುದ್ದಿಯನ್ನು ಹಂಚಿಕೊಂಡ್ರು. ನಟಿ ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ರು ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಇತ್ತೀಚಿಗಷ್ಟೇ ಸೀಮಂತದ ಫೋಟೋಗಳನ್ನು ನಟಿ ಅಮಲಾ ಪೌಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಗುಜರಾತ್ನಲ್ಲಿ ನಟಿ ಅಮಲಾ ಪೌಲ್ ಅವರ ಸೀಮಂತ ಶಾಸ್ತ್ರ ಜರುಗಿದೆ. ಗುಜರಾತಿನ ಸಂಪ್ರದಾಯದಂತೆ ಗೋಧ್ ಭರಾಯ್ ನಡೆದಿತ್ತು. ಅಮಲಾ ಸೀಮಂತದ ದಿನ ಗುಜರಾತಿ ಸ್ಟೈಲ್ ನಲ್ಲೇ ಸೀರೆಯುಟ್ಟು ಮಿಂಚಿದ್ದರು. ಪತಿಯ ಜೊತೆಗಿನ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮಲಾ ಪತಿ ಜಗತ್ ದೇಸಾಯಿ ಅವರು ಗುಜರಾತ್ ನ ಸೂರತ್ ನವರಾಗಿದ್ದಾರೆ.
ಅಮಲಾ ಜೊತೆ ಪತಿ ಜಗತ್ ದೇಸಾಯಿ ಫೋಟೋಗಳಿಗೆ ಪೋಸ್ ಕೊಟ್ರು. ಗರ್ಭಿಣಿ ಎನ್ನುವ ವಿಚಾರ ವೈರಲ್ ಆಗ್ತಿದ್ದಂತೆ ಈ ದಂಪತಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ರು. ಜಗತ್ ದೇಸಾಯಿ ಅವರು ಗೋವಾದಲ್ಲಿ ರೆಸಾರ್ಟ್ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಾರೆ.
ಅಮಲಾ ಪೌಲ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ವರದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಮಲಾ ಪೌಲ್ ಅವರನ್ನು ಅಭಿನಂದಿಸುತ್ತಿದ್ದಾರೆ. ಅದ್ರೆ ಅಮಲ್ ಪೌಲ್ ಅವಳಿ ಮಕ್ಕಳಿಗೆ ಜನ್ಮ ನೀಡಿಲ್ಲ. ಇದೆಲ್ಲಾ ರೂಮರ್ಸ್ ಅಷ್ಟೇ ಎನ್ನುವ ಮಾತುಗಳು ಹರಿದಾಡ್ತಿದೆ.