ನಿನ್ನೆಯಷ್ಟೇ ನಟ ನರೇಶ್ ಪವಿತ್ರಾ ಲೋಕೇಶ್ ಜೊತೆ ಮದುವೆಯಾದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪವಿತ್ರಾ ಲೋಕೇಶ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದೇನೆ ಎನ್ನುವ ಅರ್ಥದಲ್ಲಿ ಅದನ್ನು ಬಿಂಬಿಸಿದ್ದರು. ತೆಲುಗು ಮಾಧ್ಯಮಗಳು ಈ ವಿಡಿಯೋ ಹಿಂದೆ ಬಿದ್ದಿದ್ದವು. ಅದು ರೀಲ್ ಅಥವಾ ರಿಯಲ್ ಎನ್ನುವ ಸತ್ಯವನ್ನು ಪತ್ತೆ ಹಚ್ಚಲು ಕಸರತ್ತು ಮಾಡಿದ್ದವು. ಈ ನಡುವೆ ತೆಲುಗು ನ್ಯೂಸ್ ಚಾನೆಲ್ ವೊಂದು ನರೇಶ್ ಹನಿಮೂನ್ ಟ್ರಿಪ್ ಮಾಡಿರುವ ವಿಡಿಯೋವನ್ನು ಪ್ರಸಾರ ಮಾಡಿದೆ.
ನರೇಶ್ ಮತ್ತು ಪವಿತ್ರಾ ದುಬೈಗೆ ಹೋಗಿದ್ದ ವಿಡಿಯೋ ಅದಾಗಿದೆ. ಇದು ಕೂಡ ಅಸಲಿಯಾ? ಅಥವಾ ಸಿನಿಮಾದ ದೃಶ್ಯವಾ ಗೊತ್ತಿಲ್ಲ. ಆದರೆ, ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟನೆ ಕೊಡುವುದಾಗಿಯೂ ನರೇಶ್ ತಿಳಿಸಿದ್ದಾರೆ.
ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಷಯವನ್ನು ನಟ ನರೇಶ್ ಹಂಚಿಕೊಂಡಿದ್ದರು. ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು. ಇದೀಗ ಮತ್ತೊಂದು ವಿಡಿಯೋವನ್ನು ಸ್ವತಃ ನರೇಶ್ ಪೋಸ್ಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರನ್ನು ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ ನರೇಶ್. ಸಪ್ತಪದಿ ತುಳಿಯುವುದರಿಂದ ಹಿಡಿದ ಮದುವೆಯಲ್ಲಿ ಮಾಡಬಹುದಾದ ಎಲ್ಲ ಸಂಪ್ರದಾಯಗಳನ್ನು ಮಾಡಿದ್ದಾರೆ. ಆ ಕ್ಷಣಗಳನ್ನು ವಿಡಿಯೋ ಮಾಡಿ, ಅದನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ನಿಜವಾಗಿಯೂ ನರೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೀಗ ಹನಿಮೂನ್ ಹೋಗಿರುವ ಪೋಸ್ಟ್ ವೈರಲ್ ಆಗಿದ್ದು ಇದೆಲ್ಲಾ ನಿಜವಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ಈ ಜೋಡಿಯೇ ಸ್ಪಷ್ಟಪಡಿಸಬೇಕಿದೆ.