ವೆಸ್ಟ್ ಇಂಡೀಸ್ ಮತ್ತುಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಟ್ರೋಫಿ ಗೆದ್ದುಕೊಡಲು ಟೀಮ್ ಇಂಡಯಾದ ಅನುಭವಿ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಇದು ಕಟ್ಟ ಕಡೆಯ ಅವಕಾಶ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಎಚ್ಚರಿಕೆ ರವಾನಿಸಿದ್ದಾರೆ.
ಟೀಮ್ ಇಂಡಿಯಾ 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಆಯೋಜಿತ ಯಾವುದೇ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿಲ್ಲ. ಹಲವು ಬಾರಿ ವಿವಿಧ ಮಾದರಿಯ ವಿಶ್ವಕಪ್ಗಳಲ್ಲಿ ಫೈನಲ್ ತಲುಪಿದೆಯಾದರೂ ಟ್ರೋಫಿ ಗೆಲುವಿನ ಬರ ಮಾತ್ರ ಅಂತ್ಯಗೊಂಡಿಲ್ಲ. ತೀರಾ ಇತ್ತೀಚೆಗೆ ಎಂಬಂತೆ ಭಾರತದ ಆತಿಥ್ಯದಲ್ಲೇ ನಡೆದ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್
ಈ ಕುರಿತಾಗಿ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, 36 ವರ್ಷದ ವಿರಾಟ್ ಕೊಹ್ಲಿ ಮತ್ತು 37 ವರ್ಷದ ರೋಹಿತ್ ಶರ್ಮಾ ಅವರೊಗೆ ಭಾರತ ತಂಡಕ್ಕೆ ವಿಶ್ವಕಪ್ ಗೆದ್ದುಕೊಡುವ ಕಟ್ಟ ಕಡೇ ಅವಕಾಶ ಇದಾಗಿದೆ ಎಂದಿದ್ದಾರೆ. ಅನುಭವಿ ಬ್ಯಾಟರ್ಗಳಿಗೆ ಮತ್ತೊಂದು ವಿಶ್ವಕಪ್ ಆಡುವ ಅವಕಾಶ ಸಿಗುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ವಾರ್ನಿಂಗ್ ನೀಡಿದ್ದಾರೆ.
“ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇನ್ನು ಹೆಚ್ಚು ಸಮಯ ಭಾರತ ತಂಡದಲ್ಲಿ ಆಡುವುದಿಲ್ಲ. ಈ ಬಗ್ಗೆ ಅವರಿಗೂ ಚೆನ್ನಾಗಿ ತಿಳಿದಿದೆ. ಬಹುಶಾ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಲು ಅವರಿಗೆ ಇದು ಕಟ್ಟ ಕಡೆಯ ಅವಕಾಶ ಆಗಲಿದೆ. 2023ರಲ್ಲಿ ಒಡಿಐ ವಿಶ್ವಕಪ್ ಗೆದ್ದುಕೊಡುವ ಅವಕಾಶ ಇತ್ತು. ಅಲ್ಲಿ ಆಸ್ಟ್ರೇಲಿಯಾ ಎದುರು ಕೊಹ್ಲಿ ಮತ್ತು ರೋಹಿತ್ ಅವಕಾಶ ಕೈಚೆಲ್ಲಿದರು. ಆ ಸೋಲಿನ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅತೀವ