ಹೆಸರು ಕೇಳಿದರೆ ಸಾಕು ದೈತ್ಯ ದೇಹ, ಚೂಪಾದ ಹಲ್ಲು, ಸದಾ ಬೇಟೆಯಾಡಲು ಹೊಂಚು ಹಾಕುತ್ತಿರುವ ದೃಶ್ಯವೇ ಕಣ್ಣ ಮುಂದೆ ಬರುತ್ತದೆ. ಮೃಗಾಲಯದಲ್ಲಿ ದೂರದಿಂದ ಮೊಸಳೆಯನ್ನು ನೋಡಿ ಅದರ ಅಗಾಧ ಶಕ್ತಿಗೆ ಬೆರಗಾಗುತ್ತೇವೆ. ಅದು ಬಿಟ್ಟು ಕೋಟಿ ರೂ. ಕೊಡುತ್ತೇವೆ ಎಂದರೆ ಯಾರೂ ಮೊಸಳೆ ಸಮೀಪಕ್ಕೆ ಸುಳಿಯುವ ದುಸ್ಸಾಹಸ ಮಾಡುವುದಿಲ್ಲ.
ಹೀಗಿರುವಾಗ ನಗರದ ಮಧ್ಯೆ ದೈತ್ಯ ದೇಹಿ ಮೊಸಳೆ ಕಂಡು ಬಂದರೆ ಏನಾಗಬೇಡ? ಹೌದು, ಇಂತಹದ್ದೊಂದು ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಲುವೆಯ ಗೇಟ್ ದಾಟಿ ಜನ ನಿಬಿಡ ಪ್ರದೇಶಕ್ಕೆ ಬಂದಿದ್ದ ಸುಮಾರು 10 ಅಡಿ ಉದ್ದದ ಮೊಸಳೆ ಮರಳಿ ನೀರಿನತ್ತ ತೆರಳಲು ಪ್ರಯತ್ನಪಡುವ ದೃಶ್ಯ ನೋಡಿ ನೆಟ್ಟಿಗರು ರೋಮಾಂಚನಗೊಂಡಿದ್ದಾರೆ ಉತ್ತರ ಪ್ರದೇಶದ ಬುಲಂದ್ಶಹರ್ನ ನರೋರಾ ಘಾಟ್ ಬಳಿ ಈ ಘಟನೆ ನಡೆದಿದೆ. ಗಂಗಾ ಕಾಲುವೆಯಿಂದ ಆಕಸ್ಮಿಕವಾಗಿ ಹೊರಗೆ ಬಂದ ಈ ಬೃಹತ್ ಗಾತ್ರದ ಮೊಸಳೆ ನರೋರಾ ಬ್ಯಾರೇಜ್ ಕೆಳಗಿನ ಗಂಗಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.