‘ಪಠಾಣ್’ ಸಕ್ಸಸ್ ಬೆನ್ನಲ್ಲೇ ಶಾರುಕ್ ಖಾನ್ ನಟನೆಯ ‘ಜವಾನ್’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಸೌತ್ ಸ್ಟಾರ್ಸ್ ಕೂಡ ನಟಿಸ್ತಿದ್ದಾರೆ. ವಿಜಯ್ ಸೇತುಪತಿ, ದಳಪತಿ ವಿಜಯ್, ನಯನತಾರಾ, ಪ್ರಿಯಾಮಣಿ ಚಿತ್ರದ ತಾರಾಗಣದಲ್ಲಿದ್ದು ಇದೀಗ ಚಿತ್ರಕ್ಕೆ ಸಂಜಯ್ ದತ್ ಎಂಟ್ರಿಕೊಟ್ಟಿದ್ದಾರೆ.
ಸ್ಟಾರ್ ಕಾಸ್ಟ್ನಿಂದಲೂ ‘ಜವಾನ್’ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. 200 ಕೋಟಿ ಬಜೆಟ್ನಲ್ಲಿ ಸ್ವತಃ ಕಿಂಗ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ತೆರೆಗೆ ಬರ್ತಿದೆ. ಇತ್ತೀಚಿಗೆ ಸಾಲು ಸಾಲಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಸಂಜಯ್ ದತ್ ನಟಿಸ್ತಿದ್ದಾರೆ. KGF ನಂತರ KD, ಲಿಯೋ ಹೀಗೆ ಸಂಜು ಬಾಬಾ ನಟಿಸುತ್ತಿರುವ ಸೌತ್ ಸಿನಿಮಾಗಳ ಲಿಸ್ಟ್ ಬೆಳೀತಿದೆ.
ಕೆಲ ದಿನಗಳ ಹಿಂದೆ ‘ಜವಾನ್’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಲು ತೆಲುಗಿನ ಅಲ್ಲು ಅರ್ಜುನ್ನ ಚಿತ್ರತಂಡ ಸಂಪರ್ಕಿಸಿತ್ತು ಎನ್ನಲಾಗಿತ್ತು. ‘ಪುಷ್ಪ’-2 ಸಿನಿಮಾದಲ್ಲಿ ಬ್ಯುಸಿ ಇರುವ ಅರ್ಜುನ್ ನಟಿಸೋಕೆ ನೋ ಎಂದಿದ್ದರು ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಸಂಜಯ್ ದತ್ ‘ಜವಾನ್’ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಂದಿನ ತಿಂಗಳು ಮುಂಬೈ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯಲಿದೆ. ಇದೇ ಮೊದಲ ಬಾರಿಗೆ ಕಿಂಗ್ ಖಾನ್ ಹಾಗೂ ಶಾರುಕ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಈ ಹಿಂದೆ ಶಾರುಕ್ ನಟನೆಯ ‘ಓಂ ಶಾಂತಿ ಓಂ’ ಹಾಗೂ ‘ರಾ ವನ್’ ಸಿನಿಮಾಗಳ ಹಾಡುಗಳ ಸಣ್ಣ ಝಲಕ್ನಲ್ಲಿ ಸಂಜು ಬಾಬು ದರ್ಶನ ಕೊಟ್ಟಿದ್ದರು. ಇನ್ನು ‘ಜವಾನ್’ ಚಿತ್ರದಲ್ಲಿ ಕನ್ನಡದಿಂದ ಶಿವರಾಜ್ಕುಮಾರ್ ನಟಿಸ್ತಾರೆ ಎನ್ನಲಾಗುತ್ತಿದೆ.