ಸ್ಯಾಂಡಲ್ವುಡ್ ನಿರ್ಮಾಪಕರ ನಡುವೆ ಗೋವಾದಲ್ಲಿ ಗಲಾಟೆ ನಡೆದಿದೆ. ಟೂರ್ಗೆ ಹೋಗಿದ್ದ ಕೆಲವು ನಿರ್ಮಾಪಕರಲ್ಲಿ ನಡೆದ ಗಲಾಟೆ ಹಲ್ಲೆ ಮಾಡೋ ಹಂತಕ್ಕೆ ತಲುಪಿತ್ತು. ಎಂಜಾಯ್ ಮಾಡೋಕೆ ಗೋವಾಗೆ ಹೋದವ್ರು ಅಲ್ಲಿ ಹೊಡೆದಾಡಿಕೊಂಡಿದ್ದಾರೆ.
ಎರಡು ದಿನಗಳ ಕಾಲ ಗೋವಾಗೆ ತೆರಳಿದ್ದ ನಿರ್ಮಾಪಕರು ಅಲ್ಲಿ ಪಾರ್ಟಿ ಮಾಡಿ, ಆ ವೇಳೆ ರಂಪಾಟ ಮಾಡಿಕೊಂಡಿದ್ದಾರೆ. ನಿರ್ಮಾಪಕರಲ್ಲಿ ಒಬ್ಬರಾದ ಎ ಗಣೇಶ್ ತಲೆಗೆ ಪೆಟ್ಟು ಬಿದ್ದಿದೆ. ಹೀಗಾಗಿ ‘ಬಸ್’ನಲ್ಲಿ ತೆರಳಿದ್ದ ಗಣೇಶ್ ಹಾಗು ಮಂಜುನಾಥ್ ಗಲಾಟೆ ನಂತ್ರ ‘ಫ್ಲೈಟ್’ನಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಿರ್ಮಾಪಕ ಎ ಗಣೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಕಡೆ ಗಲಾಟೆ ನಡೆದರೆ ಅದನ್ನು ಫಿಲಂ ಚೇಂಬರ್ ಗಮನಕ್ಕೆ ತಂದು ಬಗೆಹರಿಸಲಾಗುತ್ತಿತ್ತು.
ಸಿನಿ 90 ಕಾರ್ಯಕ್ರಮದ ಕುರಿತು ಚರ್ಚೆ ಮಾಡೋಕೆ ಪ್ರೋಗ್ರಾಂ ಹೇಗೆ ಮಾಡ್ಬೇಕು ಅನ್ನೋ ಬಗ್ಗೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ವಿ. ಸತೀಶ್ ಆರ್ಯ ಹಾಗೂ ರಥಾವರ ಮಂಜು ನಡುವೆ ಗಲಾಟೆ ಶುರುವಾಯ್ತು. ಅವ್ರನ್ನ ಬಿಡಿಸೋಕೆ ಅಂತ ನಾನು ಹೋಗಿದ್ದು ಸತೀಶ್ ನನ್ಗೆ ಫೋರ್ಕ್ ಸ್ಪೂನ್ ಯಿಂದ ಚುಚ್ಚಿದ್ರು. ಎನ್ ಎಂ ಸುರೇಶ್ ತುಟಿಗೂ ಗಾಯ ಆಗಿದೆ. ಸಿನಿಮಾ ರೀತಿಯಲ್ಲಿ ಸತೀಶ್ ಆರ್ಯ ಹಲ್ಲೆ ಮಾಡಿದ್ರು. ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಾಸ್ಸಾದೆ ಇಲ್ಲಿ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಂಡೆ. ರಥಾವರ ಮಂಜುನಾಥ್ ಗೆ ಗಂಭೀರ ಗಾಯ ಆಗಿದೆ ಎಂದು ಗಣೇಶ್ ಹೇಳಿದ್ದಾರೆ.
ಸತೀಶ್ ಆರ್ಯ ಯಿಂದ ಕೆಟ್ಟ ಹೆಸರು ಬರ್ಬಾರ್ದು ಅಂತ ಕಂಪ್ಲೇಂಟ್ ಕೊಟ್ಟಿಲ್ಲ. ಹುಚ್ಚ ಸತೀಶ್ ತರದವ್ರು ಚೇಂಬರ್ ಅಲ್ಲಿ ಇದ್ರೆ ಬೆಲೆ ಇರಲ್ಲ. ಸತೀಶ್ ಹೊಡೆದ ತಕ್ಷಣ ಎಸ್ಕೇಪ್ ಆಗಿದ್ದಾರೆ. ಸತೀಶ್ ಗಲಾಟೆ ಮಾಡಿರುವ ಸಿಸಿಟಿವಿ ಫೂಟೆಜ್ ಇದೆ . ರಕ್ತ ಸುರಿತಿದೆ ಆದ್ರೂ ಡಾನ್ಸ್ ಮಾಡ್ತಿದ್ದಾನೆ. ಕುಡಿದ ಅಮಲಿನಲ್ಲಿ ಏನು ಮಾಡಿದ್ದನೋ ಆತನಿಗೆ ಗೊತ್ತಿಲ್ಲ. ಪೆಟ್ಟು ಬಿದ್ದಿರೋ ಕಾರಣ ಕಣ್ಣು ಮಂಜಾಗಿದೆ, ಕಣ್ಣು ಕಳೆದುಕೊಳ್ಳೋ ಸಂದರ್ಭ ಸಹ ಬರ್ತಿತ್ತು. ಎನ್ ಎಂ ಸುರೇಶ್ ದುಡ್ಡಲ್ಲಿ ಗೋವಾ ಹೋಗಿದ್ದು. ಚೇಂಬರ್ ದುಡ್ಡು ಒಂದು ಪೈಸೆ ಬಳಸಿಲ್ ಎಂದು ಗಣೇಶ್ ತಿಳಿಸಿದ್ದಾರೆ.