ಧಾರವಾಡ: ಧಾರವಾಡದಲ್ಲಿ ಐಐಟಿ (IIT) ಆಗಲು ಕಾರಣವೇ ಕಾಂಗ್ರೆಸ್ (Congress) ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ವೀಡಿಯೋ ಮೂಲಕ ಹೇಳಿದ್ದಾರೆ.
ಧಾರವಾಡದಲ್ಲಿ (Dharwad) ಐಐಟಿ ಉದ್ಘಾಟನೆ ಆಗುತ್ತಿರುವುದು ಖುಷಿ ತಂದಿದೆ.
ಯಾಕೆಂದರೆ ಧಾರವಾಡ ವಿದ್ಯಾಕಾಶಿ ಎಂದೇ ಖ್ಯಾತಿಯಾಗಿದೆ. ಹಿಂದಿನಿಂದಲೂ ಧಾರವಾಡ ಎಂದರೆ ವಿದ್ಯಾರ್ಥಿಗಳ ಶಿಕ್ಷಣದ ಕೇಂದ್ರ. ಇದು ಉದ್ಘಾಟನೆ ಆಗುತ್ತಿರುವ ಹಿಂದೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ (Siddaramaiah) ದೊಡ್ಡ ಪಾತ್ರವಿದೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ವೇಳೆ ರಾಯಚೂರಿಗೆ (Raichur) ಹೋಗಬೇಕು ಎಂದು ಸರ್ಕಾರ ನಿರ್ಧಾರ ಮಾಡಿತ್ತು. ಆಗ ನಾವೆಲ್ಲಾ ಮುಖಂಡರು ಹೋಗಿ ಧಾರವಾಡಕ್ಕೆ ಐಐಟಿ ಬರಬೇಕೆಂದು ಸಿದ್ದರಾಮಯ್ಯನವರ ಬಳಿ ಮನವಿ ಮಾಡಿದಾಗ ಸಿದ್ದರಾಮಯ್ಯನವರು ಅದನ್ನು ಮೈಸೂರಿಗೆ (Mysuru) ಶಿಫ್ಟ್ ಮಾಡಿದರು. ಅದನ್ನು ಮೈಸೂರಿನಿಂದ ಧಾರವಾಡಕ್ಕೆ ಬರುವಂತೆ ಮಾಡಲು ನಾವು ಬಹಳ ದೊಡ್ಡ ಹೋರಾಟ ಮಾಡಬೇಕಾಯಿತು. ಈ ಹೋರಾಟದ ಪ್ರತಿಫಲ ಧಾರವಾಡದಲ್ಲಿ ಐಐಟಿ ಉದ್ಘಾಟನೆಗೊಳ್ಳಲಿದೆ. ಇದು ನಮಗೆಲ್ಲರಿಗೂ ಸಂತಸವನ್ನು ತಂದಿದೆ ಎಂದರು.