ಇಲ್ಲಿಯವರೆಗೆ ನೀವು ಅನೇಕ ಉತ್ತಮ ಪ್ರೇಮ ಕತೆಗಳನ್ನು ಕೇಳಿದ್ದೀರಿ. ಅನೇಕ ಮಹಾನ್ ಪ್ರೇಮಿಗಳನ್ನು ನೋಡಿದ್ದೀರಿ. ಇತಿಹಾಸದಲ್ಲಿ ಪ್ರೀತಿ ಮತ್ತು ಪ್ರೇಮಿಗಳ ಬಗ್ಗೆ ಅನೇಕ ಕತೆಗಳಿವೆ. ಅವುಗಳಲ್ಲಿ ಹೆಚ್ಚಿನವು ಸ್ಫೂರ್ತಿದಾಯಕ ಕತೆಗಳು. ಇಂತಹ ಕತೆಗಳಿಂದ ಕೆಲವೊಂದು ಪಾಠ ಕಲಿಯಬೇಕಾಗುತ್ತದೆ.
ನಾವೀಗ ಹೇಳುತ್ತಿರುವ ಕತೆಯು ಕೂಡ ಅಂತಹದ್ದೇ ಒಂದು ಕತೆ. ಈ ನಿಜವಾದ ಕತೆಯಲ್ಲಿ ಪ್ರೇಮಿ ಎಂದು ಹೇಳಿಕೊಳ್ಳುವ ಯುವಕ ಹೀನಾಯವಾಗಿ ಸೋತಿದ್ದಾನೆ. ಆದರೆ, ತಂದೆಯಾಗಿ ಆತ ದೊಡ್ಡ ಯಶಸ್ಸನ್ನು ಗಳಿಸಿದ್ದಾನೆ. ತಮ್ಮ ಸ್ವಾರ್ಥ ಗುಣದಿಂದ ಪ್ರೀತಿಯನ್ನು ಅಣಕಿಸುತ್ತಿರುವ ಅದೆಷ್ಟೋ ಮಂದಿಗೆ ಈ ಹುಡುಗನ ಕತೆ ಒಂದು ಸಂದೇಶ ಸಾರಬಹುದು.
ಮೇಲಿನ ಫೋಟೋದಲ್ಲಿ ನೋಡುತ್ತಿರುವ ಯುವಕನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈತ ತಾನು ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಲಿವ್ ಇನ್ ರಿಲೇಶನ್ಶಿನ್ನಲ್ಲಿದ್ದ. ತಮ್ಮ ಸಂಬಂಧದ 4 ತಿಂಗಳ ನಂತರ ತನ್ನ ಗೆಳತಿ ಗರ್ಭಿಣಿಯಾಗಿದ್ದಾಳೆಂದು ಅರಿತುಕೊಂಡ. ಆ ನಂತರ ಆ ಮಗುವನ್ನು ಹೊಂದಲು ತೀರ್ಮಾನಿಸಲಾಯಿತು. ಆದರೆ ಕೆಲವು ತಿಂಗಳುಗಳ ನಂತರ ತನ್ನ ಪ್ರೇಯಸಿ ಬೇರೆ ಜನರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬುದನ್ನು ಯುವಕ ಅರಿತುಕೊಂಡನು. ಇದರಿಂದ ಆತನ ಹೃದಯ ಒಡೆಯಿತು. ತನ್ನ ಹುಡುಗಿ ಬೇರೆ ಜನರನ್ನು ಭೇಟಿಯಾಗುತ್ತಿರುವುದನ್ನು ನೋಡಿ ಆತನ ಮನಸ್ಸಿಗೆ ಆಘಾತವಾಯಿತು.
ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಗಲೂ ಮತ್ತೋರ್ವ ಬಾಯ್ಫ್ರೆಂಡ್ ಜತೆ ಲೈಂಗಿಕ ಸಂಬಂಧ ಹೊಂದಿದ್ದಳು. ಆದರೂ ತನಗೆ ಹುಟ್ಟಲಿರುವ ಮಗುವಿಗಾಗಿ ಈ ಯುವಕ ಅದನ್ನೆಲ್ಲ ಸಹಿಸಿಕೊಂಡ. ಮಗುವಿಗಾಗಿ ತನ್ನ ಪ್ರೇಯಸಿ ಮಾಡಿದ ತಪ್ಪುಗಳನ್ನೆಲ್ಲೆ ಕ್ಷಮಿಸಿ, ಸಂಬಂಧವನ್ನು
ಮಗುವಿಗೆ ಜನ್ಮ ನೀಡಿದಳು. ಮಗುವಿಗೆ ಎಲ್ವ್ ಎಂದು ಹೆಸರಿಸಲಾಯಿತು. ಆದರೆ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಈ ಯುವಕನ ಬದಲು ತನ್ನ ಹೊಸ ಬಾಯ್ ಫ್ರೆಂಡ್ ಜತೆ ಮದುವೆಯಾಗುವುದಾಗಿ ಯುವತಿ ಹೇಳಿದಳು. ಈ ಯುವಕನಿಗೆ ಹಣ ನೀಡಿ, ಮಗುವನ್ನು ಅನಾಥಾಶ್ರಮಕ್ಕೆ ಬಿಡುವಂತೆ ಒತ್ತಡ ಹೇರಿದಳು. ಆದರೆ ಈ ಯುವಕ ತನ್ನ ಮಗಳನ್ನು ಬಿಟ್ಟುಕೊಡಲು ಸಿದ್ಧನಿರಲಿಲ್ಲ.
ಮಗುವಿಗಾಗಿ ಸುಮಾರು ಒಂದು ವರ್ಷ ಯುವತಿಯೊಂದಿಗೆ ಜಗಳವಾಡಿದ ನಂತರ ಆತ ತನ್ನ ಮಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡ. ಇದಾದ ಬಳಿಕ ತನ್ನ ಕೆಲಸವನ್ನು ಬಿಟ್ಟು ಮಗುವನ್ನು ನೋಡಿಕೊಳ್ಳಲು ಆರಂಭಿಸಿದ. ಯಾವ ತಾಯಿಗೂ ಕಡಿಮೆ ಇಲ್ಲದಂತೆ ಆತ ಮಗುವನ್ನು ಚೆನ್ನಾಗಿ ಸಾಕಿದ. ಈ ಯುವಕನ ಪ್ರೇಮಕತೆ ಮತ್ತು ಮಗಳಿಗಾಗಿ ಅವನು ಮಾಡಿದ ತ್ಯಾಗದ ಕತೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದವರು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.