ಇದೇ ಜೂ.9 ರಂದು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಬೆದರಿಕೆ ಕರೆಗಳು ಬಂದಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನ ಐಸೆನ್ಹೋವರ್ ಪಾರ್ಕ್ ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಂದ್ಯಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ನ್ಯೂಯಾರ್ಕ್ನ ಗವರ್ನರ್ ಕ್ಯಾಥಿ ಹೊಚುಲ್ ತಿಳಿಸಿದ್ದಾರೆ.
ಮ್ಯಾನ್ಹ್ಯಾಟನ್ನ ಪೂರ್ವಕ್ಕೆ 25 ಮೈಲುಗಳಷ್ಟು ದೂರದಲ್ಲಿರುವ ಐಸೆನ್ಹೋವರ್ ಪಾರ್ಕ್ ಕ್ರೀಡಾಂಗಣವು ಜೂನ್ 3 ರಿಂದ 12 ರ ವರೆಗೆ ಎಂಟು ICC T20 WC ಪಂದ್ಯಗಳ ಆತಿಥ್ಯ ವಹಿಸುತ್ತದೆ. ಇದರಲ್ಲಿ ಎರಡು ಏಷ್ಯನ್ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹಣಾಹಣಿಯೂ ಸೇರಿದೆ.
ಸುಧಾರಿತ ಕಣ್ಗಾವಲು ಮತ್ತು ಸಂಪೂರ್ಣ ಸ್ಕ್ರೀನಿಂಗ್ ಪ್ರಕ್ರಿಯೆಗಳು ಸೇರಿದಂತೆ ಉನ್ನತ ಭದ್ರತಾ ಕ್ರಮಗಳಲ್ಲಿ ತೊಡಗಿಸಿಕೊಳ್ಳಲು ನಾನು ನ್ಯೂಯಾರ್ಕ್ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೊಚುಲ್ ಮಾಹಿತಿ ನೀಡಿದ್ದಾರೆ. ಜೂ.5 ರಂದು ಐರ್ಲೆಂಡ್ ವಿರುದ್ಧ, ಜೂ.9 ಕ್ಕೆ ಪಾಕಿಸ್ತಾನ, ಜೂ.12 ರಂದು ಯುಎಸ್ಎ ಹಾಗೂ ಜೂ.15 ಕ್ಕೆ ಕೆನಡಾ ತಂಡಗಳ ವಿರುದ್ಧ ಭಾರತ ತಂಡ ಸೆಣಸಲಿದೆ. ಯುಎಸ್ನಲ್ಲಿ ಭಾರತ ತಂಡ ಈ ನಾಲ್ಕು ಪಂದ್ಯಗಳನ್ನು ಆಡಲಿದೆ. ಮೆನ್ ಇನ್ ಬ್ಲೂ ತಂಡ ಮಂಗಳವಾರ ನ್ಯೂಯಾರ್ಕ್ಗೆ ಆಗಮಿಸಿ ತರಬೇತಿ