ಭಾರತದ ಮಾಜಿ ಆರಂಭಿಕ ಮತ್ತು ಪ್ರಸ್ತುತ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ಅವರು ಟಿ20 ವಿಶ್ವಕಪ್ ನಂತರ ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಏರಲಿದ್ದಾರೆ ಎನ್ನುವ ಸುದ್ದಿಗಳ ನಡುವೆ ಎಕ್ಸ್ನಲ್ಲಿ ಗಂಗೂಲಿ ಮಾಡಿರುವ ಈ ಕಾಮೆಂಟ್ಗಳು ಮಹತ್ವ ಪಡೆದುಕೊಂಡಿದೆ.
ಉತ್ತಮ ಕೋಚ್ನ ಮಹತ್ವವದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಗಂಗೂಲಿ, “ಒಬ್ಬರ ಜೀವನದಲ್ಲಿ ತರಬೇತುದಾರನ ಮಹತ್ವ, ಅವರ ಮಾರ್ಗದರ್ಶನ ಮತ್ತು ಪಟ್ಟುಬಿಡದ ತರಬೇತಿಯು ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುತ್ತದೆ.
ಆದ್ದರಿಂದ ಕೋಚ್ ಮತ್ತು ಸಂಸ್ಥೆಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ…” ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.ಗಂಗೂಲಿ ಅವರ ಟ್ವೀಟ್ಗೆ ನೆಟಿಜನ್ಗಳಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಾಜಿ ಬ್ಯಾಟರ್ ಅವರು ತಮ್ಮ ಆಟದ ದಿನಗಳಲ್ಲಿ ಗ್ರೆಗ್ ಚಾಪೆಲ್ ಅವರ ಕಠಿಣ ಸಮಯವನ್ನು ನೆನಪಿಸಿಕೊಂಡಿದ್ದಾರೆ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ಗಂಭೀರ್ ಅವರ ಕೋಚ್ ಆಗುವುದರ ಬಗ್ಗೆ ಸೌರವ್ ಗಂಗೂಲಿ ವಿರೋಧ ಹೊಂದಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.