ಜಾತ್ರೆಯಲ್ಲಿ ವಿಷಾಹಾರ ಸೇವಿಸಿ 44 ಜನರು ಅಸ್ವಸ್ಥವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕೇರೂರ ಗ್ರಾಮದಲ್ಲಿ ನಡೆದಿದೆ. ಕೇರೂರ ಗ್ರಾಮದ ಬೇಕ್ಕೆರಿ ತೋಟದಲ್ಲಿ ಜಾತ್ರೆಯನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನದ ಅನೇಕ ಜನ ಭಕ್ತರು ಮಹಾಪ್ರಸಾದ ಸೇವಿಸಿದರು.ಜಾತ್ರೆಯಲ್ಲಿ ಮಧ್ಯಾಹ್ನ ಉಳಿದಿದ್ದ ಅಣ್ಣವನ್ಬು ರಾತ್ರಿ ಸೇವಿಸಿ, ಇದರಿಂದ ಭಕ್ತರಿಗೆ ವಾಂತಿ,ಭೇದಿಯಿಂದ ಬಳಲುತ್ತಿದ್ದರು.
ಮುಂಜಾನೆಯಿಂದ ಅಸ್ವಸ್ಥವಾಗಿರುವುದರಿಂದ ಚಿಕ್ಕೊಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ 31 ಜನ,ಕೇರೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ಜನ ಯಕ್ಸಂಬಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಿಸಲಾಗಿತ್ತು.ಇವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದರಲ್ಲಿ ವಯೋವೃಧರು,ಪುರುಷರು,ಮಹಿಳೆಯರು, ಚಿಕ್ಕಮಕ್ಕಳು ಸಹ ವಿಷಹಾರವನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ.ಆಸ್ಪತ್ರೆಗೆ ಎಡಿಎಚ್ಓ ಎಸ್.ಎಸ್.ಗಡೇದ,ತಾಲೂಕು ಆರೋಗ್ಯಧಿಕಾರಿ ಶಿವಕುಮಾರ ಭಾಗಾಯಿ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.