ನೈರುತ್ಯ ಜರ್ಮನಿಯಲ್ಲಿ ಇಸ್ಲಾಮ್ ವಿರೋಧಿ ರ್ಯಾಲಿಯ ವೇಳೆ ದುಷ್ಕರ್ಮಿಯೊರ್ವ ಕನಿಷ್ಠ ಮೂವರನ್ನು ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ದುಷ್ಕರ್ಮಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇಸ್ಲಾಂ ವಿರೋಧಿ ಅಭಿಪ್ರಾಯಗಳನ್ನು ಹೊಂದಿರುವ ಬಿಪಿಇ ರಾಜಕೀಯ ಗುಂಪಿನ ಸಭೆಯ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಪೊಲೀಸ್ ಅಧಿಕಾರಿ ಸೇರಿದಂತೆ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.
ಗಾಯಗೊಂಡಿರುವವರಲ್ಲಿ ಇಸ್ಲಾಂ ವಿಮರ್ಶಕ ಮೈಕೆಲ್ ಸ್ಟರ್ಜೆನ್ಬರ್ಗರ್ ( 59) ಎಂದು ಹೇಳಲಾಗುತ್ತದೆ, ಅವರು ಈ ಹಿಂದೆ ಜರ್ಮನ್ ಕೌಂಟರ್-ಜಿಹಾದ್ ಗುಂಪು ” ಸಿಟಿಜನ್ಸ್ ಮೂವ್ಮೆಂಟ್ PAX ಯುರೋಪಾ” ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ದುಷ್ಕರ್ಮಿ ಮೊದಲು ದೊಡ್ಡ ಚಾಕುವಿನಿಂದ ಮೈಕಲ್ ಮೇಲೆ ದಾಳಿ ಮಾಡುವ ಆಘಾತಕಾರಿ ದೃಶ್ಯಾವಳಿಗಳು ಲೈವ್ನಲ್ಲಿ ಕಾಣಿಸಿದೆ. ಆತ ಸಂತ್ರಸ್ತನ ಮುಖ, ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಪದೇ ಪದೇ ಚಾಕು ಇರಿದಿದ್ದಾನೆ. ರ್ಯಾಲಿಯಲ್ಲಿ ಭಾಗವಹಿಸಿದ್ದ ನೀಲಿ ಬಟ್ಟೆಯನ್ನು ಧರಿಸಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ಮಾಡಿ, ಕಾಲು ಮತ್ತು ಮುಖಕ್ಕೆ ಇರಿದಿದ್ದಾನೆ. ದಾಳಿ ಕೋರ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿಗೆ ಮುಂದಾಗುತ್ತಿದ್ದಂತೆ ತಡೆಯಲು ಬಂದ ಪೋಲೀಸ್ ಅಧಿಕಾರಿಯನ್ನ ಬೀಳಿಸಿ ಹಿಂದೆಯಿಂದ ಇರಿದಿದ್ದಾನೆ. ಈ ವೇಳೆ ಮತ್ತೊಬ್ಬ ಪೊಲೀಸ್ ದಾಳಿಕೋರನ ಮೇಲೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಮ್ಯಾನ್ಹೈಮ್ ಪೊಲೀಸರ ಪ್ರಕಾರ, ಮ್ಯಾನ್ಹೈಮ್ನ ಮಾರುಕಟ್ಟೆ ಚೌಕದಲ್ಲಿ ಇಂದು ಬೆಳಿಗ್ಗೆ 11:35 ರ ಸುಮಾರಿಗೆ ಒಬ್ಬ ಪ್ರೋ ಇಸ್ಲಾಮಿಕ್ ವ್ಯಕ್ತಿಯೊಬ್ಬ ಹಲವಾರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾನೆ. ಗಾಯಗಳ ಪ್ರಮಾಣ ಮತ್ತು ತೀವ್ರತೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಲಾಗುವುದಿಲ್ಲ. ಈ ವೇಳೆ ದಾಳಿಕೋರನ ನಿಯಂತ್ರಣ ಮಾಡಲು ಸಾಧ್ಯವಾಗದ ಕಾರಣ ಬಂದೂಕನ್ನು ಬಳಸಿದೆವು. ಇದರ ಪರಿಣಾಮವಾಗಿ ದಾಳಿಕೋರ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.