ಟಿ20 ವಿಶ್ವಕಪ್ ಬ್ಯಾಟಲ್ಗೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. ಆಗಲೇ ಪಂದ್ಯಾವಳಿ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಟೀಮ್ ಇಂಡಿಯಾ, ಐಸಿಸಿ ವಿರುದ್ಧ ಸಿಡಿದೆದ್ದಿದೆ.
T20 ವಿಶ್ವಕಪ್. ಪ್ರತಿಷ್ಠಿತ ಕದನ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗಷ್ಟೇ ಅಲ್ಲ, ಟೂರ್ನಿ ಆಯೋಜಿಸುವ ಐಸಿಸಿ ಹಾಗೂ ದೇಶಗಳಿಗೂ ಪ್ರತಿಷ್ಠೆಯ ವಿಚಾರ. ವಿಶ್ವದರ್ಜೆಯ ಆಟಗಾರರು ಹಾಗೂ ತಂಡಗಳು ಇಲ್ಲಿ ಸೆಣಸಾಡುತ್ತವೆ. ಇದನ್ನು ಯಶಸ್ವಿಯಾಗಿ ನಡೆಸಿಕೊಡುವ ಜವಾಬ್ದಾರಿ ಐಸಿಸಿ ಮೇಲಿರುತ್ತೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತೆ. ಆದರೆ 2024ನೇ ಟಿ20 ವಿಶ್ವಕಪ್ ವಾರ್ ಆರಂಭಕ್ಕೂ ಮುನ್ನವೇ ಟೂರ್ನಿ ಬಗ್ಗೆ ಅಪಸ್ವರ ಕೇಳಿ ಬಂದಿದೆ.
ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ನ್ಯೂಯಾರ್ಕ್ನಲ್ಲಿನ ಎವರೇಜ್ ಪ್ರಾಕ್ಟೀಸ್ ಸೌಲಭ್ಯಕ್ಕೆ ಟೀಮ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ. ಭಾರತ ತಂಡದ ಕ್ಯಾಂಟಿಯಾಗ್ ಪಾರ್ಕ್ನಲ್ಲಿ ವಿಶ್ವಕಪ್ಗೆ ಸಿದ್ಧತೆ ಆರಂಭಿಸಿದೆ. ಇಲ್ಲಿ ಅಭ್ಯಾಸಕ್ಕೆ ಸಮರ್ಪಕ ಸೌಲಭ್ಯಗಳು ಇಲ್ಲವೆಂದು ಟೀಮ್ ಇಂಡಿಯಾ ಕೆಂಡಕಾರಿದೆ. ಇಲ್ಲಿ ಎಲ್ಲವೂ ತಾತ್ಕಾಲಿಕವಾಗಿದೆ. ಪಿಚ್ಗಳಿಂದ ಹಿಡಿದು ಇತರೆ ಸೌಲಭ್ಯಗಳ ತನಕ. ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ಕೋಚ್ ರಾಹುಲ್ ದ್ರಾವಿಡ್ ಅವರು ಐಸಿಸಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ
ವಿಶ್ವಕಪ್ನಲ್ಲಿ ಭಾಗವಹಿಸುವ ತಂಡಗಳಿಗೆ ಸೂಕ್ತ ಸೌಲಭ್ಯ ಒದಗಿಸುವುದು ಐಸಿಸಿ ಕರ್ತವ್ಯ. ಆ ವಿಚಾರದಲ್ಲಿ ಐಸಿಸಿ ಆರಂಭಿಕ ಹಂತದಲ್ಲೆ ಫೇಲಾಗಿದೆ.ಟೀಮ್ ಇಂಡಿಯಾ ವಿಶ್ವಕಪ್ ತಯಾರಿಗೆ ನ್ಯೂಯಾರ್ಕ್ನ ಕ್ಯಾಂಟಿಯಾಗ್ ಪಾರ್ಕ್ನಲ್ಲಿ ಬೀಡುಬಿಟ್ಟಿದೆ. ಇಲ್ಲಿ ಅಭ್ಯಾಸ ನಡೆಸಲು ಭಾರತ ತಂಡಕ್ಕೆ ಸೀಮಿತ ಪಿಚ್ಗಳನ್ನ ನೀಡಲಾಗಿದೆ. ಒಟ್ಟು ಆರು ಡ್ರಾಫ್ ಇನ್ ಪಿಚ್ಗಳಿವೆ. ಆದರೆ ಕೇವಲ ಮೂರು ಪಿಚ್ನಲ್ಲಿ ಅಭ್ಯಾಸ ನಡೆಸುವಂತೆ ಸೂಚಿಸಲಾಗಿದೆ. ಅದು ಶಿಫ್ಟ್ ಸರದಿಯಂತೆ ಮಾಡಬೇಕು. ಇದರಿಂದ ಭಾರತ ತಂಡ ಅಂದುಕೊಂಡಂತೆ ಅಭ್ಯಾಸ ನಡೆಸಲು ಸಾಧ್ಯವಾಗ್ತಿಲ್ಲ.