ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ತಾಯಿ ಸ್ನೇಹಲತಾ ದೀಕ್ಷಿತ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ನೇಹಿಲತಾ ದೀಕ್ಷಿತ್ ಇಂದು ಕೊನೆಯುಸಿರೆಳೆದಿದ್ದಾರೆ.
ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಾಧುರಿ ದೀಕ್ಷಿತ್ ಗುರುತಿಸಿಕೊಳ್ಳಲು ತಾಯಿ (Mother) ಸ್ನೇಹಲತಾ ಅವರ ಬೆಂಬಲ ಸಾಕಷ್ಟಿದೆ. ನಟಿ ಮಾಧುರಿಗೆ ತಾಯಿಯೇ ಶಕ್ತಿಯಾಗಿದ್ದರು.
ಮಾಧುರಿ ತಾಯಿ ಸ್ನೇಹಲತಾ ದೀಕ್ಷಿತ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರದಂದು (ಮಾ.12) ಬೆಳಿಗ್ಗೆ 8:30ರ ಸುಮಾರಿಗೆ ನಿಧನರಾಗಿದ್ದಾರೆ. ಮುಂಬೈನ ವರ್ಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆದಿದ್ದು, ಸ್ನೇಹಲತಾ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.