2010ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ನಟನೆಯ ದಬಾಂಗ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸೋನಾಕ್ಷಿ ಸಿನ್ಹಾ. ಮೊದಲ ಚಿತ್ರದಲ್ಲಿ ಸೂಪರ್ ಸ್ಟಾರ್ ಗೆ ನಾಯಕಿಯಾದ ನಟಿ ಅಷ್ಟೇ ಬೇಗನೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು.
ಸದ್ಯ ಸೋನಾಕ್ಷಿ ಹೀರಾಮಂಡಿ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಅದ್ಭುತ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಈ ಮಧ್ಯೆ 90 ಕೆಜಿ ಇದ್ದ ಸೋನಾಕ್ಷಿ 30 ಕೆಜಿ ತೂಕ ಇಳಿಸಿಕೊಂಡು 60 ಕೆಜಿ ಆಗಿದ್ದು ಹೇಗೆ ಎಂಬ ಪ್ರಶ್ನೆ ಶುರುವಾಗಿದ್ದು ಅದಕ್ಕೆ ನಟಿ ಉತ್ತರಿಸಿದ್ದಾರೆ.
ಇದೀಗ ನಟಿ ಸೋನಾಕ್ಷಿ ಸಿನ್ಹಾ ಸಖತ್ ಫಿಟ್ ಆಗಿದ್ದಾರೆ. ಆದ್ರೆ ಕೆಲ ವರ್ಷಗಳ ಹಿಂದೆ ಸೋನಾಕ್ಷಿ ಸಿನ್ಹಾ ತೂಕ 90 ಕೆಜಿ ಇತ್ತು. ನಟಿ ಸೋನಾಕ್ಷಿ ತನ್ನ ತೂಕದಿಂದಲೂ ಅಪಹಾಸ್ಯಕ್ಕಿಡಾಗಿದ್ರು. ಜೊತೆಗೆ ಸಾಕಷ್ಟು ಸಿನಿಮಾಗಳ ಆಫರ್ ಗಳನ್ನು ಕಳೆದುಕೊಂಡಿದ್ದರು. ಅದನ್ನೇ ಸಾವಾಲಾಗಿ ಸ್ವೀಕರಿಸಿದ ನಟಿ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡರು.
ಯಾವುದೇ ಡಯೆಟ್ ಹಾಗೂ ಅತಿಯಾದ ಜಿಮ್ ವರ್ಕೌಟ್ ಕೂಡ ಮಾಡದೆ ನಟಿ ಸೋನಾಕ್ಷಿ ತಮ್ಮ ತೂಕ ಇಳಿಸಿಕೊಂಡಿದ್ದಾರಂತೆ ಅದು ಹೇಗೆ ಗೊತ್ತಾ? ಸೋನಾಕ್ಷಿಗೆ ಅಷ್ಟು ಸುಲಭವಾಗಿ ಪರ್ಫೆಕ್ಟ್ ವೇಟ್ ಲಾಸ್ ಮಾಡಿಕೊಂಡಿದ್ದು ಹೇಗೆ ಎಂಬ ಸೀಕ್ರೆಟ್ ಇಲ್ಲಿದೆ.
ನಟಿ ಸೋನಾಕ್ಷಿ ಸಿನ್ಹಾ ಫುಡ್ ಲವರ್ ಆಗಿದ್ದು, ಡಯಟ್ ಮಾಡುವುದು ಅಸಾಧ್ಯದ ಮಾತಾಗಿತ್ತು. ಆದ್ದರಿಂದ, ಹಸಿವು ನಿಯಂತ್ರಿಸುವ ರೀತಿಯಲ್ಲಿ ತಮ್ಮ ಆಹಾರದ ಡಯೆಟ್ ಪ್ಲಾನ್ ಮಾಡಿದ್ರು. FabOn ವರದಿ ಪ್ರಕಾರ ಸೋನಾಕ್ಷಿ ನಿಯಮಿತವಾಗಿ ಆಹಾರ ಸೇವಿಸುತ್ತಿದ್ದರಂತೆ ಅವರು ಬೆಳಗಿನ ಬ್ರೇಕ್ಫಾಸ್ಟ್ ಗಾಗಿ ಹಾಲು ಮತ್ತು ಕೆಲವು ಧಾನ್ಯಗಳನ್ನು ಸೇವಿಸುತ್ತಿದ್ದರು. ಜೊತೆಗೆ ಟೋಸ್ಟ್ ತಿನ್ನುತ್ತಿದ್ದರಂತೆ.
ಕೆಲ ಗಂಟೆಗಳ ಬಳಿಕ ಲೈಟ್ ಫುಡ್ ತೆಗೆದುಕೊಳ್ತಿದ್ದ ಸೋನಾಕ್ಷಿ ಗ್ರೀನ್ ಟೀ ಕುಡಿಯುತ್ತಿದ್ರು. ಡ್ರೈಫೂಟ್ಸ್ ತೆಗೆದುಕೊಳ್ತಾರೆ. ಊಟದ ಟೈಮ್ನಲ್ಲಿ ಸಲಾಡ್ ಜೊತೆಗೆ ಬ್ರೆಡ್ ಮತ್ತು ತರಕಾರಿಗಳನ್ನು ತಿನ್ನುತ್ತಿದ್ರು.
ಸಂಜೆ ಗ್ರೀನ್ ಟೀ ಅಥವಾ ಹಣ್ಣುಗಳನ್ನು ಸೇವಿಸುತ್ತಿದ್ದರು. ಸೋನಾಕ್ಷಿ ಅವರು ಸಂಜೆ 6 ಗಂಟೆಯ ನಂತರ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸುತ್ತಿರಲಿಲ್ಲ. ಆದ್ದರಿಂದ ಅವರು ರಾತ್ರಿಯ ಊಟಕ್ಕೆ ಬೇಳೆಕಾಳುಗಳು, ತರಕಾರಿಗಳು, ಕೋಳಿ ಮತ್ತು ಮೀನುಗಳನ್ನು ಮಾತ್ರ ತಿನ್ನುತ್ತಿದ್ದರು ಇದಲ್ಲದೆ, ದಿನವಿಡೀ ತನ್ನನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳುವುದು ಮೊದಲ ಕೆಲಸವಾಗಿತ್ತು.
ಸಂದರ್ಶನವೊಂದರಲ್ಲಿ ಮಾತಾಡಿದ್ದ ನಟಿ ಸೋನಾಕ್ಷಿ ಜಿಮ್ ಗೆ ಹೋಗೋದು ಅಥವಾ ವರ್ಕೌಟ್ ಮಾಡುವುದು ನನಗೆ ಸುಲಭದ ಕೆಲಸವಾಗಿರಲಿಲ್ಲ ಎಂದಿದ್ದಾರೆ. ಜಿಮ್ಗೆ ಹೋಗೋದು ಇಷ್ಟವಿರಲಿಲ್ಲ, ಜಿಮ್ಗೂ ಹೋಗದೆ ಸೈಕ್ಲಿಂಗ್, ಯೋಗ, ರನ್ನಿಂಗ್ ರೇಸ್, ಸ್ಪೀಡ್ ವಾಕ್, ಟೆನಿಸ್ ಆಟಗಳನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಂಡಿದ್ರು. ಕೆಲವೊಮ್ಮೆ ಅವರು ತೂಕ ಇಳಿಕೆ ವಿಚಾರದ ಸಲಹೆ ಪಡೆಯಲಿ ಆಗಾಗ ಜಿಮ್ ತರಬೇತುದಾರರ ಬಳಿಗೆ ಹೋಗುತ್ತಿದ್ದರು ಎಂದು ಹೇಳಿದ್ದಾರೆ.
ಸೋನಾಕ್ಷಿ ಅವರು ಬಿಹಾರದ ರಾಜಧಾನಿ ಪಾಟ್ನಾದಲ್ಲಿ 2 ಜೂನ್ 1987 ರಂದು ಹಿರಿಯ ನಟರಾದ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಅವರಿಗೆ ಜನಿಸಿದ್ರು. ಸೋನಾಕ್ಷಿ ಅವರ ತಂದೆ ಸೂಪರ್ ಸ್ಟಾರ್ ಆಗಿರುವುದರಿಂದ ಆಕೆ ಕೂಡ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ನಿರ್ಧರಿಸಿದ್ದಾರೆ. ಆರಂಭದಲ್ಲಿ ಬಾಲಿವುಡ್ನಲ್ಲಿ ಯಶಸ್ಸು ಕಂಡರೂ ನಂತರ ಹೆಚ್ಚು ಹೆಸರು ಮಾಡಲಾಗಲಿಲ್ಲ.