ಟಾಲಿವುಡ್ ನಟಿ ಸಮಂತಾ ಅಪರೂಪದ ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಸಮಂತಾ ದೇವಿಯ ಆರಾಧನೆಯಲ್ಲಿ ಮುಳುಗಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.
ಸಮಂತಾ ತಮ್ಮ ವೈಯಕ್ತಿಕ ಬದುಕಿನಲ್ಲಿ ನಡೆದಿರುವ ಕಹಿ ಘಟನೆಯನ್ನ ಮರೆಯಲು ಸಿನಿಮಾ, ಜಿಮ್, ಟೆಂಪಲ್ ರನ್ ಅಂತಾ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮನ್ನ ಆಕ್ಟೀವ್ ಆಗಿ ಇಟ್ಟುಕೊಂಡಿದ್ದಾರೆ. ಇದೀಗ ನಟಿ ಲಿಂಗಭೈರವಿ ದೇವಿಯ ಮೊರೆ ಹೋಗಿದ್ದಾರೆ.
ನಂಬಿಕೆಯೇ ಜೀವನದ ಮುಖ್ಯ ಶಕ್ತಿ. ನಂಬಿಕೆಯೇ ನಿಮ್ಮನ್ನು ಶಾಂತವಾಗಿರಿಸುತ್ತದೆ. ನಂಬಿಕೆಯೇ ನಿಮ್ಮ ಗುರು. ನಂಬಿಕೆಯೇ ನಿಮ್ಮನ್ನು ಬೆಳೆಸುತ್ತದೆ ಎಂದು ದೇವಿಯ ಮುಂದೆ ಸಮಂತಾ ಕುಳಿತು ಧ್ಯಾನ ಮಾಡ್ತಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿಯ ಹೊಸ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.