ದೇಶವಷ್ಟೇ ಅಲ್ಲ ಇಡೀ ಪ್ರಪಂಚವೇ ಎದುರು ನೋಡ್ತಿರೋ ದಿನ ಬಂದೇ ಬಿಟ್ಟಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಮತಗಟ್ಟೆ ಸಮೀಕ್ಷಾ ವರದಿಗಳ ಲೆಕ್ಕಾಚಾರ ಜೋರಾಗಿದೆ. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಕೆಲವು ಸಂಸ್ಥೆಗಳು ಎನ್ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದ್ದು, ಇಂಡಿಯಾ ಮೈತ್ರಿಕೂಟ 200ರ ಒಳಗೆ ಇರಲಿದೆ ಎಂದಿವೆ. ಯಾವ್ಯಾವ ಮತದನೋತ್ತರ ಸಮೀಕ್ಷೆಗಳು ಏನೇನು ಭವಿಷ್ಯ ನುಡಿದಿವೆ ಎಂಬ ಮಾಹಿತಿ ಇಲ್ಲಿದೆ.
ಟಿವಿ9 ಪೋಲ್ಸ್ಟ್ರಾಟ್ ಮತ್ತು ಪೀಪಲ್ಸ್ ಇನ್ಸೈಟ್ ನಡೆಸಿದ ಸಮೀಕ್ಷೆ ಪ್ರಕಾರ 346 ಕ್ಷೇತ್ರ ಎನ್ಡಿಎಗೆ ಸಿಗಲಿದೆ ಎಂದು ಅಂದಾಜಿಸಿದ್ದು, ಇಂಡಿಯಾ ಮೈತ್ರಿಕೂಟ ಕೇವಲ 162 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಹಾಗೆಯೇ ಆಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಎನ್ಡಿಎ 361ರಿಂದ 401ರವರೆಗೂ ಗೆಲ್ಲುವ ಸಾಧ್ಯತೆ ಇದೆ ಅಂತಾ ಹೇಳಿದೆ. ಹಾಗೆಯೇ ಇಂಡಿಯಾ ಕೂಟ 131ರಿಂದ 166 ಸ್ಥಾನ ಗೆಲ್ಲಲಿದೆಯಂತೆ. ಇನ್ನೂ ಟುಡೇಸ್ ಚಾಣಕ್ಯ ಸರ್ವೆ ಪ್ರಕಾರ ಎನ್ಡಿಎ 385ರಿಂದ 415ರವರೆಗೂ ಗೆಲ್ಲೋ ಸಾಧ್ಯತೆ ಇದೆಯಂತೆ. ಆದ್ರೆ, ಇಂಡಿಯಾ ಮೈತ್ರಿಕೂಟ 96ರಿಂದ 118 ಸ್ಥಾನವನ್ನಷ್ಟೇ ಗೆಲ್ಲಲಿದೆ ಅಂತಾ ಟುಡೇಸ್ ಚಾಣಕ್ಯ ಸಮೀಕ್ಷೆ ಹೇಳ್ತಿದೆ. ಜೊತೆಗೆ ಸಿಎನ್ಎಕ್ಸ್ ಸರ್ವೆ ಕೂಡ ಎನ್ಡಿಎ 371 ರಿಂದ 401ರವರೆಗೂ ಗೆಲ್ಲಲಿದೆ ಅಂತ ಅಂದಾಜಿಸಲಾಗಿದೆ
ಸಂಭ್ರಮಾಚರಣೆಗೆ ಲಡ್ಡು ತಯಾರಿಸ್ತಿರೋ ಬಿಜೆಪಿ ಕಾರ್ಯಕರ್ತರು
ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಬಿಹಾರದ ಪಾಟ್ನಾದಲ್ಲಿ 400 ಕೆಜಿ ಲಡ್ಡು ಸಿದ್ಧಗೊಳಿಸಿದ್ದಾರೆ. ಮುಂಬೈ, ಆಗ್ರಾ ಮತ್ತು ಭೋಪಾಲ್ ಸೇರಿದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಲಡ್ಡು ತಯಾರಿಸಿದ್ದಾರೆ. ಇತ್ತ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿದ್ಯುತ್ ದೀಪಾಲಂಕರಾಗಳಿಂದ ಸಿಂಗರಿಸಲಾಗಿದ್ದು, ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ.
ವಿಜಯೋತ್ಸವಕ್ಕೆ ಬಿಜೆಪಿ, ಕಾಂಗ್ರೆಸ್ ಕಚೇರಿಯಲ್ಲೂ ಸಿದ್ಧತೆ
ಅತ್ತ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮೈತ್ರಿಕೂಟವೂ ಗೆಲುವಿನ ವಿಶ್ವಾಸದಲ್ಲಿದೆ. ದೆಹಲಿ ಕಾಂಗ್ರೆಸ್ ಕಚೇರಿಯಲ್ಲೂ ಸಂಭ್ರಮಕ್ಕೆ ಸಿದ್ಧತೆ ನಡೆದಿದೆ. ದೇಶದ ಮತದಾರರ ಪ್ರಭುಗಳು ಯಾರಿಗೆ ಜೈ ಎಂದಿದ್ದಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.: ಜೂನ್ 1ರಂದು ಪ್ರಕಟಗೊಂಡ
ಮತದಾನೋತ್ತರ ಸಮೀಕ್ಷಗಳ ಪೈಕಿ ಬಹು