ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಸುರಪುರ ಕ್ಷೇತ್ರ ವಿಧಾನಸಭೆ ಉಪಚುನಾವಣೆ ಮತದಾನ ಮೇ7 ರಂದು ನಡೆದಿದೆ. ಇಂದು (ಜೂ 04) ಫಲಿತಾಂಶ ಪ್ರಕಟವಾಗುತ್ತಿದೆ. ಬಿಜೆಪಿಯಿಂದ ನರಸಿಂಹ ನಾಯಕ್ (ರಾಜುಗೌಡ) ಕಣದಲ್ಲಿ ಇದ್ದಾರೆ ಇವರ ವಿರುದ್ಧ ಕಾಂಗ್ರೆಸ್ನ ರಾಜಾ ವೇಣುಗೋಪಾಲ ನಾಯಕ್ ಅವರು ಸ್ಪರ್ಧಿಸಿದ್ದಾರೆ. ರಾಜಾ ವೇಣುಗೋಪಾಲ ನಾಯಕ್ ಅವರಿಗೆ ಇದು ಮೊದಲನೇ ಚುನಾವಣೆಯಾಗಿದೆ. ಒಟ್ಟು 2,15,268 ಜನರು ಮತ ಚಲಾಯಿಸಿದ್ದಾರೆ.
ರಾಜಾ ವೇಣುಗೋಪಾಲ ನಾಯಕ್.
2023ರಲ್ಲಿ ನಡೆದ ವಿಧಾಸಭೆ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ್ ತಂದೆ, ದಿ. ರಾಜಾ ವೆಂಕಟಪ್ಪ ನಾಯಕ್ ಅವರು 1,13,559 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಬಿಜೆಪಿಯ ರಾಜುಗೌಡ 88,336 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ರಾಜಾ ವೆಂಕಟಪ್ಪ ನಾಯಕ್ ಅವರು ರಾಜುಗೌಡ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನರಸಿಂಹ ನಾಯಕ್ (ರಾಜುಗೌಡ) ಅವರು 1,104,426 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ದಿ. ರಾಜಾ ವೆಂಕಟಪ್ಪ ನಾಯಕ್ ಅವರು 81,858 ಮತಗಳನ್ನು ಪಡೆದಿದ್ದರು. ರಾಜುಗೌಡ ಅವರು ರಾಜಾ ವೆಂಕಟಪ್ಪ ನಾಯಕ್ ಅವರನ್ನು 22 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.