ಬಹುನಿರೀಕ್ಷಿತ, ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಬಹು ಯಶಸ್ವಿಯೊಂದಿಗೆ 18ನೇ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಎನ್ಡಿಎ 400 ಸ್ಥಾನ ದಾಟುತ್ತಾ? ಇಂಡಿಯಾ ಮೈತ್ರಿಕೂಟ 295 ಸ್ಥಾನ ಗೆಲ್ಲುತ್ತಾ? ಎಲ್ಲಾ ಪ್ರಶ್ನೆಗಳಿಗೂ ಇವತ್ತು ಉತ್ತರ ಸಿಗಲಿದೆ. ಇಂಡಿಯಾ ಮೈತ್ರಿಕೂಟ ತಾನಂದುಕೊಂತೆ 295 ಸೀಟುಗಳನ್ನ ಗೆದ್ದು ಅಚ್ಚರಿ ಸೃಷ್ಟಿಸುತ್ತಾ? ಇಂತಹ ಹತ್ತಾರು ಪ್ರಶ್ನೆಗಳು ರಾಜಕೀಯ ನಾಯಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕಾಡುತ್ತಿವೆ. ಇಂದು ಹೊರಬೀಳಲಿರುವ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಕೇಂದ್ರದಲ್ಲಿ ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಅನ್ನೋದು ಕುತೂಹಲ ಇಮ್ಮಡಿಗೊಳಿಸಿದೆ. ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್ ರೂಮ್ಗನ್ನು ಬೆಳಗ್ಗೆ 7ಗಂಟೆಗೆ ಓಪನ್ ಮಾಡಲಾಗುತ್ತೆ. ಬೆಳಗ್ಗೆ 8 ಗಂಟೆಯಿಂದ ಎಣಿಕೆ ಆರಂಭವಾಗುತ್ತದೆ.
ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿ 18 ಜೆಡಿಎಸ್ 2 ಸ್ಥಾನ ಸೇರಿ ಒಟ್ಟು 20 ಕ್ಷೇತ್ರದಲ್ಲಿ ದೋಸ್ತಿಗಳು ಗೆಲ್ತಾರೆ ಅಂತಾ ಟಿವಿ9 ಪೋಲ್ಸ್ಟ್ರಾಟ್ ಮತ್ತು ಪೀಪಲ್ಸ್ ಇನ್ಸೈಟ್ ಸಮೀಕ್ಷೆ ಭವಿಷ್ಯ ನುಡಿದಿದೆ. ಕಾಂಗ್ರೆಸ್ ಕೇವಲ 8 ಸ್ಥಾನ ಗೆಲ್ಲಿಲಿದೆ ಅಂತಾ ಅಂದಾಜಿಸಿದೆ. ಹಾಗೆಯೇ ಆಕ್ಸಿಸ್ ಮೈ ಇಂಡಿಯಾ ಎನ್ಡಿಎ 23ರಿಂದ 25, ಕಾಂಗ್ರೆಸ್ 3ರಿಂದ 5 ಸ್ಥಾನ ಗೆಲ್ಲಬಹುದು ಅಂತಾ ಭವಿಷ್ಯ ನುಡಿದಿದೆ. ಇನ್ನೂ ಜನ್ ಕಿ ಬಾತ್ ಸರ್ವೆ ಪ್ರಕಾರ ಎನ್ಡಿಎ 21ರಿಂದ 23 ಕ್ಷೇತ್ರದಲ್ಲಿ ಜಯ ಸಾಧಿಸಲಿದೆ. ಕಾಂಗ್ರೆಸ್ 5ರಿಂದ 7 ಸ್ಥಾನ ಗೆಲ್ಲೋ ಸಾಧ್ಯತೆ ಇದೆ. ಸಿ ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ 23ರಿಂದ 25 ಸ್ಥಾನ ಗೆಲ್ಲುತ್ತೆ ಎಂಬ ಭವಿಷ್ಯ ಹೊರಬಿದ್ದಿದೆ. ಕಾಂಗ್ರೆಸ್ 3ರಿಂದ 5 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಲಿದೆಯಂತೆ. ಹಾಗೆಯೇ ಟುಡೇಸ್ ಚಾಣಕ್ಯ ಸರ್ವೆ ಪ್ರಕಾರ 24 ಸ್ಥಾನ ಬಿಜೆಪಿ ಪಾಲಾದ್ರೆ, ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಕ್ಕೆ ಸೀಮಿತವಾಗುತ್ತೆ ಅಂತಾ ಲೆಕ್ಕಾಚಾರ ಹಾಕಲಾಗಿದೆ. ಈ ಸಮೀಕ್ಷೆ ಪ್ರಜಾ ಟಿವಿ ಲೈವ್ ಫಾಲ್ಲೋ ಮಾಡಿ