ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ತುದಿಗಾಲಲ್ಲಿ ನಿಂತಿರ್ತಾರೆ. ಆದರೆ ಅವರನ್ನೆಲ್ಲರನ್ನು ಭೇಟಿ ಮಾಡಲು ಸ್ಟಾರ್ ನಟರಿಗೆ ಸಾಧ್ಯವಾಗೋದಿಲ್ಲ. ಆದರು ಕೆಲವೊಮ್ಮೆ ಬಿಡುವು ಮಾಡಿಕೊಂಡು ಅಭಿಮಾನಿಗಳು ಭೇಟಿ ಮಾಡಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಅಂತೆಯೇ ಇತ್ತೀಚೆಗೆ ಸುದೀಪ್ ಅವರನ್ನು ವಿಶೇಷ ಅಭಿಮಾನಿಯೊಬ್ಬರು ಭೇಟಿ ಮಾಡಿದ್ದು ಅಭಿಮಾನಿಗೆ ಸುದೀಪ್ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಮಾತು ಬಾರದ ವಿಶೇಷಚೇತನ ಅಭಿಮಾನಿ ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿದ್ದಾನೆ. ಕಿಚ್ಚನಿಗೆ ಏನು ಹೇಳಬೇಕು ಅದನ್ನ ಬರವಣಿಗೆಯಲ್ಲಿ ಬರೆದು ತಂದಿದ್ದಾನೆ. ಅಭಿಮಾನಿ ಬರೆದುಕೊಂಡು ಬಂದಿದ್ದ ಪತ್ರವನ್ನ ಸುದೀಪ್ ತಾಳ್ಮೆಯಿಂದ ಓದಿದ್ದಾರೆ.
ನಂತರ ನನ್ನಿಂದ ಏನಾಗ್ಬೇಕು ಅಂತ ಸುದೀಪ್ ಸನ್ನೆಯಿಂದಲೇ ಕೇಳಿದ್ದಾರೆ. ಅದಕ್ಕೆ ಅಭಿಮಾನಿ ಕೂಡಾ ಪ್ರತಿಕ್ರಿಯಿಸಿದ್ದಾನೆ. ಬಳಿಕ ಸುದೀಪ್ ವಿಶೇಷಚೇತನ ಅಭಿಮಾನಿಗೆ ಸಹಾಯವನ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಊಟ ಆಯ್ತಾ ಅಂತಾ ಸುದೀಪ್ ಸನ್ನೆ ಮೂಲಕ ಕೇಳಿದ್ದಾರೆ, ಇಲ್ಲ ಎಂದು ಅಭಿಮಾನಿ ಪ್ರತಿಕ್ರಿಯಿಸಿದ್ದಾನೆ. ಸರಿ ಇಲ್ಲೆ ಊಟ ಮಾಡಿ ಹೋಗಿ ಎಂದು ಸುದೀಪ್ ಅಭಿಮಾನಿಗೆ ಊಟ ಮಾಡಿಸಿ ಕಳುಹಿಸಿದ್ದಾರೆ.
ಅಭಿಮಾನಿಗೆ ಮಾತು ಬರುವುದಿಲ್ಲ ಆದರೂ ಕಿಚ್ಚ ಸುದೀಪ್ ಭೇಟಿ ಮಾಡಬೇಕು. ತನ್ನ ಮನದಾಳದ ಮಾತನ್ನ ಹಂಚಿಕೊಳ್ಳಬೇಕು ಅಂತ ಸಾಕಷ್ಟು ದೂರದಿಂದ ಬಂದು ಸುದೀಪ್ ಅವರನ್ನು ಭೇಟಿಯಾಗಿದ್ದಾನೆ. ಸುದೀಪ್ ಹಾಗೂ ಅಪ್ಪು ಇರುವ ಫೋಟೋವನ್ನ ಉಡುಗೊರೆಯಾಗಿ ನೀಡಿದ್ದಾನೆ.