ಬಿಜೆಪಿಯ ಭದ್ರಕೋಟೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ- ಕಮಲ ಪಕ್ಷಗಳ ಮಧ್ಯೆ ತೀವ್ರ ಜಿದ್ದಾಜಿದ್ದಿ ಇದೆ. ಸತತ ನಾಲ್ಕು ಬಾರಿ ಗೆದ್ದಿರುವ ಪ್ರಹ್ಲಾದ್ ಜೋಶಿ ಅವರಿಗೆ ಕಾಂಗ್ರೆಸ್ನ ಹೊಸ ಮುಖ ವಿನೋದ್ ಅಸೂಟಿ ಭಾರೀ ಪೈಪೋಟಿ ನೀಡಿದ್ದಾರೆ. ಸದ್ಯ ಜೋಶಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆದ್ರೆ ಈಗ ಸದ್ಯ ಜೋಶಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೌದು ಕಾಂಗ್ರೆಸ್ನ ಹೊಸ ಮುಖ ವಿನೋದ್ ಅಸೂಟಿ ವಿರುದ್ಧ 17242 ಮತಗಳ ಮುನ್ನಡೆಯನ್ನು ಕಾಯ್ತುಕೊಂಡಿದ್ದಾರೆ. ಇನ್ನೂ ಕಾಂಗ್ರೆಸ್ ನಿಂದ ಕಣಕ್ಕಳಿದಿರುವ ವಿನೋದ್ ಅಸೂಟಿ 66458 ಮತಗಳಲ್ಲಿ ಇದ್ದಾರೆ. ಜೋಶಿ 83700 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇನ್ನೂ 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 70.12ರಷ್ಟು ಮತದಾನವಾಗಿತ್ತು. ಆಗ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ 2.05 ಲಕ್ಷ ಮತಗಳ ಅಂತರದ ಗೆಲುವು ಕಂಡಿದ್ದರು. ಈ ಬಾರಿ ಶೇ.74.37ರಷ್ಟು ಮತದಾನವಾಗಿದೆ. ಆದರೆ, ಹೆಚ್ಚುವರಿ ಮತಗಳು ಯಾರ ಪರ ಇವೆ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಲಿದೆ