ನವದೆಹಲಿ ಲೋಕಸಭೆ ಚುನಾವಣೆ ಯ ಫಲಿತಾಂಶ ಹೊರ ಬಿದ್ದಿದ್ದು, ಮುಂದಿನ ಸರ್ಕಾರವನ್ನು ರಚಿಸಲು ತೀವ್ರ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ಮ ತ್ತು ರಾಷ್ಟ್ರೀಯ ಜನತಾ ದಳ ಮುಖಂಡ ತೇಜಸ್ವಿ ಯಾದವ್ಬು ಧವಾರ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಈ ಇಬ್ಬರು ಬಿಹಾರದ ನಾಯಕರು ಬೆಳಿಗ್ಗೆ 10.30ಕ್ಕೆ ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ವಿಶೇಷ ಎಂದರೆ ನಿತಿಶ್ ಕುಮಾರ್ ಬಿಜೆಪಿ ನೇತೃತ್ವದ ಎನ್ಡಿಎ ಬಣದಲ್ಲಿದ್ದರೆ ತೇಜಸ್ವಿ ಯಾದವ್ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ನಾಯಕರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ನಿತೀಶ್ ಕುಮಾರ್ ಅವರನ್ನು ʼಇಂಡಿಯಾʼ ಒಕ್ಕೂಟ ತನ್ನತ್ತ ಸೆಳೆಯಲು ಮುಂದಾಗಿರುವುದು ಕೂಡ ರಾಜಕೀಯ ಚಟಿವಟಿಕೆ ಬಿರುಸು ಪಡೆದುಕೊಳ್ಳಲು ಕಾರಣವಾಗಿದೆ. ಕೆಲವು ತಿಂಗಳ ಮೊದಲು, ಎನ್ಡಿಎಗೆ ಸೇರುವ ಮುನ್ನ ನಿತೀಶ್ ಕೂಡ ಯುಪಿಎ ಜತೆಗಿದ್ದರು ಎನ್ನುವುದು ಗಮನಾರ್ಹ.