ಚಂದ್ರನ ಅಂಗಳದಲ್ಲಿನ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ತರಲಿರುವ ತನ್ನ ಬಾಹ್ಯಾಕಾಶ ನೌಕೆಯು ಭೂಮಿಯತ್ತ ಪ್ರಯಾಣ ಆರಂಭಿಸಿದೆ ಎಂದು ಚೀನಾ ಹೇಳಿಕೆ ನೀಡಿದೆ.
ಕಳೆದ ತಿಂಗಳು ಉಡಾವಣೆ ಮಾಡಲಾಗಿದ್ದ ಚೇಂಜ್’ಇ-6 ಹೆಸರಿನ ಬಾಹ್ಯಾಕಾಶ ನೌಕೆಯು ಇತ್ತೀಚೆಗೆ ಚಂದ್ರನ ಮೇಲ್ಮೈನಲ್ಲಿ ಇಳಿದಿತ್ತು.ಈಗಾಗಲೇ ಚಂದ್ರನ ಮೇಲ್ಮೈನಲ್ಲಿ ಸಂಗ್ರಹಿಸಿರುವ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ನೌಕೆಯಲ್ಲಿನ ಪೆಟ್ಟಿಗೆಯಲ್ಲಿಟ್ಟುಕೊಂಡಿದ್ದು, ಜೂನ್ 25ರಂದು ಚೀನಾದ ಇನ್ನರ್ ಮಂಗೋಲಿಯಾ ಪ್ರಾಂತ್ಯದ ಮರುಭೂಮಿಯಲ್ಲಿ ಬಂದಿಳಿಯಲಿದೆ ಎಂದು ಚೀನಾ ತಿಳಿಸಿದೆ.