ಕಾಂತಾರ ಸಿನಿಮಾ ರಿಲೀಸ್ ಆದ ಬಳಿಕ ನಟಿ ಸಪ್ತಮಿ ಗೌಡ ಅವರ ಲಕ್ಕು ಹಾಗೂ ಲುಕ್ಕೂ ಎರಡು ಬದಲಾಗಿದೆ. ಸಪ್ತಮಿ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಜೊತೆಗೆ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿಕೊಟ್ಟು ಬಂದಿದ್ದಾರೆ. ಸದ್ಯ ಕನ್ನಡದಲ್ಲಿ ಕಾಳಿ ಹೆಸರಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಗ್ಯಾಪ್ನಲ್ಲಿಯೇ ಹೊಸ ಫೋಟೋ ಶೂಟ್ನಲ್ಲಿ ನಟಿ ಮಿಂಚಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಇದು ಫೋಟೋ ಶೂಟ್ ಮಾಡಿಸಲು ಸರಿಯಾದ ಸಮಯ ಎಂದು ಅನಿಸುತ್ತಿದ್ದಂತೆ ಮಳೆ ನಿಂತ ತಕ್ಷಣವೇ ಸಪ್ತಮಿ ಮಸ್ತ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ.
ಸಿಲಿಕಾನ್ ಸಿಟಿ ಮಳೆ ಸುರಿದು ತಂಪಾಗಿದೆ. ಈ ಕೂಲ್ ವಾತಾವರಣದಲ್ಲಿ ಅಷ್ಟೇ ಕೂಲ್ ಎಂಡ್ ಸ್ಟೈಲಿಶ್ ಆಗಿ ಸಪ್ತಮಿ ನಯಾ ಫೋಟೋ ಶೂಟ್ ಮಾಡಿಸಿದ್ದಾರೆ.
ವೈಟ್ ಸ್ಲಿವ್ಲೆಸ್ ಟಾಪ್, ನೀಲಿ ಬಣ್ಣದ ಸ್ಕರ್ಟ್ ತೊಟ್ಟು ಬೆಂಗಳೂರಿನ ರಸ್ತೆಯಲ್ಲಿ ನಿಂತು ಸ್ಟೈಲಿಶ್ ಆಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಬೋಲ್ಡ್ ಅವತಾರ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಸಪ್ತಮಿ ಗೌಡ ತಮ್ಮ ಈ ವಿಶೇಷ ಫೋಟೋಗಳನ್ನ ಸೋಷಿಯಲ್ ಮೀಡಿಯಾದ ತಮ್ಮ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. Running around rainy Bangalore ಎಂದು ನಟಿ ತಮ್ಮ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಈ ಹಿಂದೆ ಸಪ್ತಮಿ ಗೌಡ ‘ದಿ ವ್ಯಾಕ್ಸಿನ್ ವಾರ್’ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ನಿತಿನ್ಗೆ ನಾಯಕಿಯಾಗಿ ‘ತಮ್ಮುಡು’ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದ್ದಾರೆ.
ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಸಪ್ತಮಿ ಗೌಡ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಸಪ್ತಮಿ ಗೌಡ ಹಲವಾರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಪ್ ಸಿಕ್ಕಾಗ ಹೊಸ ಹೊಸ ಫೋಟೊ ಶೂಟ್ಗಳನ್ನ ಮಾಡಿಸಿ, ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.