ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದ ಅಪ್ತ ರಕ್ಷನ ಪುತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ. ಪಂಜಾಬ್ನ ಫರಿದ್ಕೋಟ್ನಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸರಬ್ಜಿತ್ ಸಿಂಗ್ ಖಲ್ಸಾ ಅವರು 70,053 ಮತಗಳ ಅಂತರದಿಂದ ಆಪ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
ಸರಬ್ಜಿತ್ ಸಿಂಗ್ ಖಲ್ಸಾ 2,98,062 ಮತಗಳನ್ನು ಪಡೆದರೆ ಆಪ್ ಅಭ್ಯರ್ಥಿ ಕರಮ್ಜಿತ್ ಸಿಂಗ್ 2,28,009 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಮರ್ಜಿತ್ ಕೌರ್ 1,60,357 ಮತಗಳನ್ನು ಪಡೆದರೆ ಶಿರೋಮಣಿ ಅಕಾಲಿದಳ ರಜ್ವಿಂದರ್ ಸಿಂಗ್ 1,38,251 ಮತ, ಬಿಜೆಪಿಯ ಹನ್ಸ್ ರಾಜ್ ಹನ್ಸ್ 1,23,533 ಮತಗಳನ್ನು ಪಡೆದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಸಾದಿಕ್ ಇಲ್ಲಿ 83
ಕಾಂಗ್ರೆಸ್ಗೆ 4,19,065 ಮತಗಳು ಬಿದ್ದರೆ ಶಿರೋಮಣಿ ಅಕಾಲಿ ದಳಕ್ಕೆ 3,35,809 ಮತಗಳು ಬಿದ್ದಿದ್ದವು. 1984ರ ಅಕ್ಟೋಬರ್ 31 ರಂದು ಸರಬ್ಜಿತ್ ಸಿಂಗ್ ತಂದೆ ಮತ್ತು ಸತ್ವಂತ್ ಸಿಂಗ್ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಮಾಡಿದ್ದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿ ಅವರನ್ನು ದೆಹಲಿಯ ನಿವಾಸದಲ್ಲೇ ಗುಂಡಿಟ್ಟು ಹತ್ಯೆ ಮಾಡಿದ್ದರು.