ಮಂಡ್ಯ ಜಿಲ್ಲೆಯಲ್ಲಿ ನಾವು ಸೋಲು ಗೆಲುವುಗಳನ್ನು ನೋಡಿದ್ದೇವೆ . ಹಿಂದೆ ಜೆ.ಡಿ.ಎಸ್ ನ ಎಂಟೂ ಜನರನ್ನು ಗೆಲಿಸಿಕೊಟ್ಟು ನಂತರ ಐದು ವರ್ಷ ನಿರಾಸೆ ಹೊಂದಿದ್ದ ಜನ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಏಳು ಶಾಸಕರನ್ನು ಗೆಲ್ಲಿಸಿದ್ದಾರೆ.
ಒಂದು ವರ್ಷ ನಾವೂ ಅವರ ಸೇವೆಯನ್ನು ಮಾಡಿದ್ದೇವೆ. ನಮ್ಮ ಪಕ್ಷ, ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕೊಟ್ಟರೂ, ಈ ಲೋಕಸಭಾ ಚುನಾವಣೆಯಲ್ಲಿ ತೀರ್ಪನ್ನು ನಮ್ಮ ವಿರುದ್ಧ ಕೊಟ್ಟಿದ್ದಾರೆ ಜಿಲ್ಲೆಯಲ್ಲಿ ಜನರ ತೀರ್ಪಿಗೆ ತಲೆಬಾಗುತ್ತೇವೆ.
ಅವರು ಏನು ಭರವಸೆ ಕೊಟ್ಟಿದ್ದಾರೆ ರಾಷ್ಟ್ರಮಟ್ಟದಿಂದ ನಾವು ಏನೇನೋ ಭರವಸೆಗಳನ್ನ ತರುತ್ತೇವೆ ಎಂದು ಹೇಳಿದ್ದಾರೆ ನಾವು ಸಂತೋಷವಾಗಿ ಅವು ಈಡೇರಿಸೋದನ್ನ ಕಾದುನೋಡುತ್ತೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ