ಲಂಚ ಪಡೆದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಸಚಿವ ಝಿಝಿ ಕೊಡ್ವಾ ಅವರನ್ನು ಪೊಲೀಸರು ಬಂಧಿಸಲಾಗಿದೆ.
ಕ್ರೀಡಾ, ಕಲೆ ಮತ್ತು ಸಂಸ್ಕೃತಿ ಖಾತೆಗಳನ್ನು ಹೊಂದಿರುವ ಕೊಡ್ವಾ, ಉದ್ಯಮಿಯೊಬ್ಬರಿಂದ 90 ಸಾವಿರ ಡಾಲರ್ ( ₹75ಲಕ್ಷ) ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಲಂಚ ಪಡೆದ ಹಣವನ್ನು ಐಷಾರಾಮಿ ಎಸ್ಯುವಿ ವಾಹನಗಳನ್ನು ಖರೀದಿಸಲು ಇವರು ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಡ್ವಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ.