2024 ರ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಅಣ್ಣಾಮಲೈ ಅವರ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಡಿಎಂಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ. ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಅವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿ ಮುಖ್ಯಮಂತ್ರಿ ಸ್ಟಾಲಿನ್ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಅನಾಗರಿಕ ವರ್ತನೆ ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಮೂಲಭೂತ ಸಭ್ಯತೆಯನ್ನು ಪ್ರದರ್ಶಿಸಿಲು ಹೇಳಿ. ತಮಿಳುನಾಡು ಪೊಲೀಸರು ವೀಕ್ಷಕರಾಗುವ ಬದಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ
ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ 1,18,068 ಮತಗಳ ಅಂತರದಿಂದ ಸೋತಿದ್ದರು. ಡಿಎಂಕೆ ಗಣಪತಿ ರಾಜ್ಕುಮಾರ್ ಅವರು 5,68,200 ಮತಗಳನ್ನು ಪಡೆದರೆ ಅಣ್ಣಾಮಲೈ 4,50,132 ಮತಗಳನ್ನು ಗಳಿಸಿದ್ದಾರೆ. ಎಐಡಿಎಂಕೆಯ ಸಿಂಗಯ್ ಜಿ ರಾಮಚಂದ್ರನ್ ಅವರು 2,36,490 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.