ಬಾಲಿವುಡ್ ನಟಿ, ಮಂಡಿ ಕ್ಷೇತ್ರದ ನೂತನ ಸಂಸದೆ ಕಂಗನಾ ರಣಾವತ್ಗೆ ಅವರಿಗೆ ದೆಹಲಿ ಏರ್ ಪೋರ್ಟ್ ನಲ್ಲಿ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವೀಂದರ್ ಕೌರ್ ತಾವು ಮಾಡಿದ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಕಂಗನಾ ರನೌತ್ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ನಾನು ಕಪಾಳ ಮೋಕ್ಷ ಮಾಡಿದ್ದೇನೆ. 100 ರೂಪಾಯಿ ಆಸೆಗೆ ರೈತರ ವೇಷದಲ್ಲಿ ಪ್ರತಿಭಟನಾಕಾರರು ಕುಳಿತಿದ್ದಾರೆ ಎಂದು ಕಂಗನಾ ಹೇಳಿದ್ದರು. ಅವರು ಅಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆಯೇ? ಅವರು ಈ ಹೇಳಿಕೆಯನ್ನು ನೀಡಿದಾಗ ನನ್ನ ತಾಯಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಕುಲ್ವಿಂದರ್ ಕೌರ್ ಹೇಳಿದ್ದಾರೆ.
ಕಂಗನಾಗೆ ಕಪಾಳ ಮೋಕ್ಷ ಮಾಡಿದ ಕುಲ್ವೀಂದರ್ ಕೌರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಂಗನಾ ರೈತರನ್ನು ಅಗೌರವಿಸಿದ್ದು ಕೌರ್ ಅವರ ಕೋಪಕ್ಕೆ ಕಾರಣವಾಗಿದೆ.
ಸದ್ಯ ಕಂಗನಾ ಚಂಡೀಗಢ ವಿಮಾನ ನಿಲ್ದಾಣದಲ್ಲಿರುವ ಕೆಲ ವೀಡಿಯೋಗಳು ವೈರಲ್ ಆಗುತ್ತಿವೆ. ವೀಡಿಯೋದಲ್ಲಿ ಕಂಗನಾ ಅವರು ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಕೌಂಟರ್ ಕಡೆಗೆ ಬೆಂಗಾವಲಾಗಿ ಹೋಗುವುದನ್ನು ತೋರಿಸುತ್ತದೆ. ಈ ಸಮಯದಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದೆ .