ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಜನತೆ ದಾಖಲೆಯ ಗೆಲುವು ನೀಡಿದ್ದಾರೆ. ರಾಜವಂಶಸ್ಥರು ಹಾಕಿಕೊಟ್ಟಿರುವ ಮಾರ್ಗದಲ್ಲಿನಡೆದು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಸಂಸದರಾಗಿ ಆಯ್ಕೆಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದರು. “ಚುನಾವಣೆ ಘೋಷಣೆಯಾದಾಗ ನನಗೆ ರಾಜಕಾರಣದ ಬಗ್ಗೆ ಯಾವುದೇ ಅನುಭವವಿರಲಿಲ್ಲ.
ಅಲ್ಲದೇ ಈ ಗೆಲುವಿನ ಹಾದಿ ದೊಡ್ಡ ಸವಾಲುಗಳಿಂದ ಕೂಡಿತ್ತು. ಮೈಸೂರು ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿದ್ದು, ಅವರೇ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡಿದರು. ಇಬ್ಬರು ಸಚಿವರು ಅದಕ್ಕೆ ಹೆಗಲು ಕೊಟ್ಟು ಕೆಲಸ ಮಾಡಿದರು. ಆದರೂ ಜನರು ನನ್ನನ್ನು ಜಯಶಾಲಿಯಾಗಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯಾದ ಮೇಲೆ ಬಹುಶಃ ಇದೇ ದೊಡ್ಡಮಟ್ಟದ ಅಂತರದ ಗೆಲುವಾಗಿದೆ. ಇದಕ್ಕೆ ಕಾರ್ಯಕರ್ತರಾದ ನಿಮ್ಮ ಸಹಕಾರವೇ ಕಾರಣ. ಮುಂದೆ ನಾವೆಲ್ಲರೂ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ,” ಎಂದರು.