ಅಸ್ತಮಾಗೆ ಔಷಧಿ ಸೇವಿಸಲು ಜನತೆ ಬಾಯ್ದೆರೆದು ಕುಳಿತಿದ್ದು, ಆದರೆ ಈ ಔಷಧಿ ಎಲ್ಲರಿಗೂ ಸಿಗಲ್ಲ ಎನ್ನಲಾಗಿದೆ.
ಹೌದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ರೋಗಿಗಳು ಬರುತ್ತಿದ್ದಾರೆ.
ಶನಿವಾರ ಮುಂಜಾನೆ 7:45 ಕ್ಕೆ ಸರಿಯಾದ ಸಮಯಕ್ಕೆ ಔಷಧಿಯನ್ನು ಏಕಕಾಲಕ್ಕೆ ಪಡೆಯಬೇಕಾಗುತ್ತದೆ. ಮುಂಜಾನೆ 4 ಗಂಟೆಯಿಂದ ಅಶೋಕರಾವ್ ಔಷಧಿಯನ್ನು ನೀಡುತ್ತಾರೆ. ಔಷಧಿ ಪಡೆಯಲು ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ (Police) ಬಂದೋಬಸ್ತ್ ಮಾಡಲಾಗಿದೆ.
ಈ ಬಾರಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಂದ ಜನ ಔಷಧಿಗಾಗಿ ಬರುತ್ತಾರೆ. ಚಿಕ್ಕ ಗ್ರಾಮದಲ್ಲಿ ಔಷಧಿ ಪಡೆಯಲು ಲಕ್ಷಾಂತರ ಜನ ಬಂದಿದ್ದು, ಅವರೆಲ್ಲ ಏಕಕಾಲಕ್ಕೆ ಮಾತ್ರೆ ತೆಗೆದುಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ಸಾಗುತ್ತಾರೆ.
ಕೊಪ್ಪಳ ತಾಲೂಕಿನ ಕುಟುಗನಳ್ಳಿಯ ಅಶೋಕರಾವ್ ಕುಲಕರ್ಣಿಯವರು ಮೃಗಶಿರ ಮಳೆಯ ಸಂದರ್ಭದಲ್ಲಿ ಔಷಧಿಯನ್ನು ನೀಡುತ್ತಾರೆ. ಅವರ ತಂದೆ ವ್ಯಾಸರಾವ್ ಕುಲಕರ್ಣಿಯವರಿಂದು ಸುಮಾರು 65 ವರ್ಷಗಳಿಂದ ಔಷಧಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಈ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಅಸ್ತಮಾ ಸೇರಿದಂತೆ ಕೆಲವು ಹವಾಮಾನದ ಕಾಯಿಲೆಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಸಮಯಕ್ಕೆ ಸರಿಯಾಗಿ ಗಂಟೆ ಬಾರಿಸುತ್ತಲೆ ಮಾತ್ರೆಯನ್ನು ನುಂಗಿ ನೀರು ಕುಡಿದು ತಮ್ಮ ತಮ್ಮ ಗ್ರಾಮಗಳತ್ತ ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಜನರ ಸಂಖ್ಯೆ ಅಧಿಕವಾಗುತ್ತಿದೆ. ಒಂದು ವರ್ಷ ತೆಗೆದುಕೊಂಡವರು ಪ್ರತಿ ವರ್ಷವೂ ಬರುತ್ತಾರೆ
ಮಳೆಗಾಲ ಮೃಗಶಿರ ಮಳೆಯಿಂದ ಬೇಸಿಗೆ ಕಾಲ ಮುಗಿದು ಚಳಿಗಾಲ ಆರಂಭವಾಗುತ್ತಿದೆ. ಇದೇ ಕಾರಣಕ್ಕೆ ಮೃಗಶಿರ ಮಳೆ ಕೂಡುವ ಸಂದರ್ಭದಲ್ಲಿ ಅಸ್ತಮಾ ರೋಗಿಗಳಿಗೆ ಔಷಧಿ ಪಡೆಯುತ್ತಾರೆ. ಇಂಥ ಔಷಧಿ ನೀಡುವ ಸ್ಥಳಕ್ಕೆ ಕೊಪ್ಪಳ ತಾಲೂಕಿನ ಕುಟುಗನಹಳ್ಳಿಯು ಫೇಮಸ್ ಆಗಿದೆ.