ಹೈದರಾಬಾದ್: ಈನಾಡು ಮತ್ತು ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ (87) ವಿಧಿವಶರಾಗದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್ ಅವರು ಜೂನ್ 5 ರಂದು ಹೈದರಾಬಾದ್ನ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಇಂದು ಬೆಳಗ್ಗಿನ ಜಾವ 4:50ರ ಸುಮಾರಿಗೆ ನಿಧನರಾಗಿದ್ದಾರೆ.
1974ರಲ್ಲಿ ಮಾಧ್ಯಮ ರಂಗದಲ್ಲಿ ರಾಮೋಜಿ ರಾವ್ ಇಟ್ಟ ಮತ್ತೊಂದು ಹೆಜ್ಜೆ ಸಂಚಲನ ಮೂಡಿಸಿತ್ತು. ಹಲವು ಪತ್ರಿಕೆ, ಮ್ಯಾಗಜಿನ್ ಜೊತೆ ಈನಾಡು ಹೆಚ್ಚು ಸರ್ಕುಲೇಶನ್ ಆದ ದಿನಪತ್ರಿಕೆ ಆಗಿ ಹೆಸರು ಮಾಡಿತು. ಬದಲಾವಣೆ ಮಾತ್ರ ಶಾಶ್ವತ ಎಂದು ರಾಮೋಜಿ ರಾವ್ ನಂಬಿದ್ದರು. ಇದು ತೆಲುಗು ಓದುಗರ ದೈನಂದಿನ ದಿನಚರಿಯಾಗಿತ್ತು. ಪ್ರಾಮಾಣಿಕತೆ ಮತ್ತು ಸಮಗ್ರತೆ ಈ ಪತ್ರಿಕೆಯಲ್ಲಿ ಸಾಬೀತಾಗಿತ್ತು.
1976ರ ಮೊದಲಾರ್ಧದಲ್ಲಿ 48,339 ಪ್ರತಿಗಳಿತ್ತು. 2011ರ ಮೊದಲಾರ್ಧ ಈ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿತ್ತು . ಕೋವಿಡ್ ಸಮಯದಲ್ಲಿ ಪತ್ರಿಕೆಗಳು ಅಂತ್ಯ ಕಾಣುತ್ತದೆ ಎಂದೇ ಹಲವರು ಅನುಮಾನಿದ್ದರು. ಆದರಿಂದು ಅವೆಲ್ಲವನ್ನೂ ರಾಮೋಜಿ ಅವರ ಪ್ರಯತ್ನಗಳು ಬುಡಮೇಲು ಮಾಡಿವೆ. ಇಂದಿಗೂ ಇದು 23 ಕೇಂದ್ರಗಳಲ್ಲಿ ಮುದ್ರಿಸಲ್ಪಡುತ್ತಿದೆ. ಜೊತೆಗೆ, ಅತಿ ಹೆಚ್ಚು ಸರ್ಕ್ಯುಲೇಶನ್ ಹೊಂದಿರುವ ತೆಲುಗು ದಿನಪತ್ರಿಕೆಯಾಗಿದೆ.
- ರಾಮೋಜಿ ರಾವ್ ಅವರು 1936ರ ನವೆಂಬರ್ 16 ರಂದು ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದರು.
- ರಾಮೋಜಿಯವರು ಈನಾಡು ಮೂಲಕ ತೆಲುಗು ಪತ್ರಿಕಾ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿದರು.
- ಈನಾಡು 10ನೇ ಆಗಸ್ಟ್ 1974 ರಂದು ವಿಶಾಖಪಟ್ಟಣಂ ತೀರದಲ್ಲಿ ಪ್ರಾರಂಭವಾಯಿತು.
- ರಾಮೋಜಿಯವರು ಸ್ಥಾಪಿಸಿದ ಈನಾಡು ದಿನಪತ್ರಿಕೆ ತೆಲುಗು ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
- ತೆಲುಗು ಪತ್ರಿಕಾ ಲೋಕದಲ್ಲಿ ‘ಈನಾಡು’ ಹೊಸ ಯುಗವನ್ನು ಆರಂಭಿಸಿದೆ.
- ಈನಾಡು ಆರಂಭವಾದ ನಾಲ್ಕೇ ವರ್ಷಗಳಲ್ಲಿ ಓದುಗರಿಂದ ಭಾರಿ ಮೆಚ್ಚುಗೆ ಗಳಿಸಿತು.
- ಈನಾಡು ಜೊತೆಗೆ ಪ್ರಮುಖ ಮೈಲಿಗಲ್ಲು ಆಗಿರುವ ಮುನ್ನಡೆಯುತ್ತಿರುವ ಸಿತಾರಾ ಸಿನಿಪತ್ರಿಕೆ
- ಬಹುಮುಖ ಪ್ರತಿಭೆ.. ಕಠಿಣ ಪರಿಶ್ರಮ.. ಇವು ರಾಮೋಜಿಯವರ ಅಸ್ತ್ರ
- ಹೊಸ ಸಾಧನೆ ಮಾರ್ಗಗಳನ್ನು ಸೃಷ್ಟಿಸುತ್ತಿರುವುದು ರಾಮೋಜಿಯವರಿಗೆ ಕರಗತ
- ತನ್ನ ಗುರಿಯನ್ನು ಸಾಧಿಸಲು ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಯೋಧ
- ರಾಮೋಜಿ ರಾವ್ ಅವರು ರೈತರ ಪರವಾಗಿ ಉದ್ಯಮಿಯಾಗಿ ಬೆಳೆದರು
- ರಾಮೋಜಿ ರಾವ್ ಮಾಧ್ಯಮ ಸಾಮ್ರಾಜ್ಯವನ್ನು ಕಟ್ಟಿದರು
- ರಾಮೋಜಿ ರಾವ್ ಅವರು ಅದ್ಭುತ ಫಿಲ್ಮ್ಸಿಟಿಯನ್ನು ನಿರ್ಮಿಸಿದ್ದಾರೆ
- ರಾಮೋಜಿ ರಾವ್ ತೆಲುಗು ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು
- ರಾಮೋಜಿ ರಾವ್ ಅವರು ಕೊನೆಯ ಕ್ಷಣದವರೆಗೂ ಜನಕಲ್ಯಾಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದರು
- ರಾಮೋಜಿ ರಾವ್ ಅವರು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರದಲ್ಲೂ ಅಳಿಸಲಾಗದ ಛಾಪು ಮೂಡಿಸಿದರು
- ಈನಾಡು ದಿನಪತ್ರಿಕೆಯ ಮೂಲಕ ಸಾವಿರಾರು ಪತ್ರಕರ್ತರನ್ನು ದೇಶಕ್ಕೆ ನೀಡಿದ ರಾಮೋಜಿಯವರಿಗೆ ಸಲ್ಲುತ್ತದೆ
- ರಾಮೋಜಿಯವರು ಟಿವಿ ಇಂಡಸ್ಟ್ರಿಯ ಮೂಲಕ ಸಾವಿರಾರು ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿದವರು
- ದೂರದರ್ಶನ ಲೋಕದಲ್ಲಿ ರಾಮೋಜಿ ರಾವ್ ಅಳಿಸಲಾಗದ ಛಾಪು ಮೂಡಿಸಿದರು
- ಪ್ರತಿಕ್ಷಣದ ವರ್ಲ್ಡ್ ವ್ಯೂಗಾಗಿ ರಾಮೋಜಿಯವರು 13 ಭಾಷೆಗಳಲ್ಲಿ ETV ಸುದ್ದಿ ಸ್ಟ್ರೀಮ್ ಆರಂಭಿಸಿ ಗಮನ ಸೆಳೆದಿದ್ದಾರೆ.
- ಮಾಧ್ಯಮ ಕ್ಷೇತ್ರಕ್ಕೆ ರಾಮೋಜಿ ರಾವ್ ಮೊದಲ ಹೆಜ್ಜೆ ಇಟ್ಟಿದ್ದು 1969ರಲ್ಲಿ
- ರಾಮೋಜಿ ರಾವ್ ಮೊದಲಿಗೆ ಅನ್ನದಾತ ಪತ್ರಿಕೆ ಪ್ರಾರಂಭಿಸಿದರು.
- ಕೃಷಿಯಲ್ಲಿ ಆಧುನಿಕ ವಿಧಾನಗಳು ಮತ್ತು ತಂತ್ರಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು
- ಕೃಷಿ ಕ್ಷೇತ್ರದಲ್ಲಿ ಅನ್ನದಾತ ಪತ್ರಿಕೆ ಮೂಲಕ ಹೊಸ ಕೃಷಿ ಕ್ರಾಂತಿಗೆ ನಾಂದಿ ಹಾಡಿದವರು ರಾಮೋಜಿ
ಹಣಕಾಸಿನಕ್ಷೇತ್ರದಲ್ಲೂರಾಮೋಜಿರಾವ್ಮೇರುಸಾಧನೆ:
- ರಾಮೋಜಿ ರಾವ್ ಅವರು 1962 ರಲ್ಲಿ ಮಾರ್ಗದರ್ಶಿ ಚಿಟ್ಫಂಡ್ಗಳನ್ನು ಸ್ಥಾಪಿಸಿದರು
- ದೇಶದ ಅಗ್ರ ಚಿಟ್ಫಂಡ್ಗಳ ಕಂಪನಿಯಾಗಿ ಮಾರ್ಗದರ್ಶಿ ಕೂಡ ಒಂದಾಗಿದೆ
- ಲಕ್ಷಾಂತರ ಗ್ರಾಹಕರಿಗೆ ಸೇವೆಗೆ ಮಾರ್ಗದರ್ಶಿ ಹೆಸರು ವಾಸಿಯಾಗಿದೆ
- ಮಾರ್ಗದರ್ಶಿ ಚಿಟ್ಫಂಡ್ಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದರು
- ಸದ್ಯ ಮಾರ್ಗದರ್ಶಿ ಸಂಸ್ಥೆ ಆರಂಭವಾದಾಗಿನಿಂದ ಈವರೆಗೆ 113ಕ್ಕೂ ಹೆಚ್ಚು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ
- ಮಾರ್ಗದರ್ಶಿ ಲಕ್ಷಾಂತರ ಕುಟುಂಬಗಳ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಚಿಟ್ ಫಂಡ್ ಉದ್ಯಮದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ.