ರಾಮೋಜಿ ಫಿಲ್ಮ್ ಸಿಟಿ ನಿರ್ಮಿಸಿದ ರಾಮೋಜಿ ರಾವ್ನಿ ಧನರಾಗಿದ್ದಾರೆ. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮೋಜಿ ರಾವ್ ಇಂದು ಮುಂಜಾನೆ 4:50ಕ್ಕೆ ಕೊನೆಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು ರಾಮೋಜಿ ಫಿಲಂ ಸಿಟಿಗೆ ಸ್ಥಳಾಂತರಿಸಲಾಗಿದೆ. ರಾಮೋಜಿ ರಾವ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಮೋಜಿ ರಾವ್ ಆದ್ರು ರಾಮಯ್ಯ
ರಾಮೋಜಿ ರಾವ್ ಅವರು ನವೆಂಬರ್ 16, 1936 ರಂದು ಕೃಷ್ಣ ಜಿಲ್ಲೆಯ ಪೆದಪರುಪುಡಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ರಾಮೋಜಿ ರಾವ್ ಅವರ ತಾತ ತೀರಿಕೊಂಡ 13 ದಿನಗಳ ನಂತರ ಅವರು ಜನಿಸಿದ ಕಾರಣ, ಅವರ ನೆನಪಿಗಾಗಿ ಅವರ ಪೋಷಕರು ರಾಮಯ್ಯ ಎಂದು ಹೆಸರಿಟ್ಟರು. ಆದರೆ ರಾಮಯ್ಯ ಎನ್ನುವ ಹೆಸರು ಅವರಿಗೆ ಇಷ್ಟವಾಗಲಿಲ್ಲವಂತೆ, ಬಳಿಕ ಅವರೇ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವೇಳೆ “ರಾಮೋಜಿ ರಾವ್” ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರಂತೆ.
ಹಲವು ಉದ್ಯಮಗಳನ್ನು ನಿರ್ಮಿಸಿದ ರಾಮೋಜಿ ರಾವ್
ರಾಮೋಜಿ ರಾವ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ವ್ಯಾಪಾರ ದೈತ್ಯ ಎಂದೇ ದೊಡ್ಡ ಖ್ಯಾತಿಯನ್ನು ಹೊಂದಿದ್ದಾರೆ. ಹಿರಿಯ ನಿರ್ಮಾಪಕ, ಈಟಿವಿ ಮಾಧ್ಯಮವನ್ನು ಶುರು
ಮಾಡುವುದರ ಜೊತೆಗೆ ರಾಮೋಜಿ ರಾವ್ ಅವರು ಅನೇಕ ವ್ಯವಹಾರಗಳಲ್ಲಿ ಕೆಲಸ ಮಾಡಿದ್ದಾರೆ.
ರಾಮೋಜಿ ರಾವ್ ಮೊದಲ ಬ್ಯುಸಿನೆಸ್
ರಾಮೋಜಿ ರಾವ್ ಅವರು ಅಕ್ಟೋಬರ್ 1962 ರಲ್ಲಿ ಹೈದರಾಬಾದ್ನಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಅನ್ನು ಪ್ರಾರಂಭಿಸಿದ್ರು. ಇದು ಅವರ ಜೀವನದಲ್ಲಿ ಮೊದಲ ಬ್ಯುಸಿನೆಸ್ ಆಗಿದೆ. 1965ರಲ್ಲಿ ಕಿರಣ್ ಆಡ್ಸ್ ಎಂಬ ಜಾಹೀರಾತು ಏಜೆನ್ಸಿಯನ್ನು ಆರಂಭಿಸಿದ್ರು. 1967-1969ರ ನಡುವೆ ಖಮ್ಮಂ ಪ್ರದೇಶದಲ್ಲಿ ವಸುಂಧರಾ ಫರ್ಟಿಲೈಸರ್ಸ್ ಹೆಸರಿನಲ್ಲಿ ರಸಗೊಬ್ಬರ ವ್ಯಾಪಾರವನ್ನು ಕೂಡ ಶುರು ಮಾಡಿದ್ರು. 1969 ರಲ್ಲಿ ರಾಮೋಜಿ ರಾವ್ ಅವರು ಕೃಷಿ ಮಾಹಿತಿ ನೀಡುವ ಸಲುವಾಗಿಯೇ ‘ಅನ್ನದಾತ’ ಪತ್ರಿಕೆಯನ್ನು ಪ್ರಾರಂಭಿಸಿದ್ರು.
1970ರಲ್ಲಿ ಸಿನಿಮಾಗಳ ಜಾಹೀರಾತು ಸಂಸ್ಥೆಯನ್ನು ಪ್ರಾರಂಭಿಸಿದರು. ಅವರ ಪತ್ನಿ ರಮಾದೇವಿ ಈ ಸಂಸ್ಥೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ರು.
ರಾಮೋಜಿ ಗ್ರೂಪ್ ಅಡಿಯಲ್ಲಿ ಮಾರ್ಗದರ್ಶಿ ಚಿಟ್ ಫಂಡ್ಸ್, ಈನಾಡು ಪತ್ರಿಕೆ, ಈಟಿವಿ, ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ರಾಮೋಜಿ ಫಿಲ್ಮ್ ಸಿಟಿ, ಕಲಾಂಜಲಿ ಶೋ ರೂಂಗಳನ್ನು ಆರಂಭಿಸಿದರು. ವಿಶ್ವದ ಅತಿ ದೊಡ್ಡ ರಾಮೋಜಿ ಫಿಲ್ಮ್ ಸಿಟಿಯನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದ್ರು.
ರಾಮೋಜಿ ರಾವ್ ನಿಧನಕ್ಕೆ ನರೇಂದ್ರ ಮೋದಿ ಸಂತಾಪ
ಟ್ವಿಟರ್ನಲ್ಲಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. “ಶ್ರೀ ರಾಮೋಜಿ ರಾವ್ ಅವರ ನಿಧನ ಬಹಳ ದುಃಖ ತಂದಿದೆ. ಭಾರತೀಯ ಮಾಧ್ಯಮದಲ್ಲಿ ಕ್ರಾಂತಿಯನ್ನು ಮಾಡಿದದಾರ್ಶನಿಕರಾಗಿದ್ದರು. ಅವರ ಕೊಡುಗೆ ಪತ್ರಿಕೋದ್ಯಮ ಮತ್ತು ಚಲನಚಿತ್ರ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ಅವರ ಗಮನಾರ್ಹ ಪ್ರಯತ್ನಗಳ ಮೂಲಕ, ಅವರು ಮಾಧ್ಯಮ ಮತ್ತು ಮನರಂಜನೆಯ ಜಗತ್ತಿನಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ಸ್ಥಾಪಿಸಿದವರು ಎಂದು ಬರೆಯಲಾಗಿದೆ.