ಬಿಗ್ ಬಾಸ್ ನಲ್ಲಿ ಪ್ರೀತಿಸಿ ಬಳಿಕ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಜೋಡಿಗಳು ಶಾಕ್ ನೀಡಿದ್ದಾರೆ. ಇದೀಗ ಚಂದನ್, ನಿವೇದಿತಾ ಡಿವೋರ್ಸ್ ಬಗ್ಗೆ ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯಿಸಿದ್ದಾರೆ.
ಚಂದನ್ ಮತ್ತು ನಿವೇದಿತಾ ಕಾನೂನು ಬದ್ಧವಾಗಿ ಡಿವೋರ್ಸ್ ಪಡೆದ ಬೆನ್ನಲ್ಲೇ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ವೈಯಕ್ತಿಕ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ. ಲೈಫ್ ಇಸ್ ನಾಟ್ ಈಸಿ ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಾವೇನು ಕಾಂಟ್ರುಬ್ಯೂಟ್ ಮಾಡದೇ ಹೋದರೆ ನಾವೇನು ಕಾಮೆಂಟ್ ಮಾಡೋಕೆ ಹೋಗಬಾರದು ಎಂದು ನಟಿ ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 5’ರಲ್ಲಿ ಚಂದನ್ ಹಾಗೂ ನಿವೇದಿತಾ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಸಾಕಷ್ಟು ಸಾಕಷ್ಟು ವಿವಚಾದ ಹುಟ್ಟಿಹಾಕಿತ್ತು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾದ ನಾಲ್ಕೇ ವರ್ಷಕ್ಕೆ ಜೋಡಿ ದೂರವಾಗೋ ಮೂಲಕ ಶಾಕ್ ನೀಡಿದ್ದಾರೆ.