ಸೀತಾರಾಮಂ ಸಿನಿಮಾದ ಮೂಲಕ ಖ್ಯಾತಿ ಘಳಿಸಿರುವ ನಟಿ ಮೃಣಾಲ್ ಠಾಕೂರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ಗಿಂತ ದಕ್ಷಿಣ ಭಾರತದ ಸಿನಿಮಾಗಳಲ್ಲೇ ನಟಿ ಹೆಚ್ಚು ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮೃಣಾಲ್ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಸಿನಿಮಾಗಳ ಬಳಿಕ ಮೃಣಾಲ್ ಕಾಲಿವುಡ್ನಲ್ಲಿಯೂ ಮಿಂಚಲು ಸಜ್ಜಾಗಿದ್ದಾರೆ. ತಮಿಳು ನಟ ರಾಘವ್ ಲಾರೆನ್ಸ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಮೃಣಾಲ್ಗೆ ಚಾನ್ಸ್ ಸಿಕ್ಕಿದೆ. ‘ಕಾಂಚನಾ’ ಸಿನಿಮಾದ ಮುಂದುವರೆದ ಭಾಗದಲ್ಲಿ ಮೃಣಾಲ್ ಕಾಣಿಸಿಕೊಳ್ತಿದ್ದಾರೆ.
‘ಕಾಂಚನಾ-4’ ಸಿನಿಮಾ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಹಾರರ್ ಕಥೆಗೆ ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಮೃಣಾಲ್ರನ್ನು ಭೇಟಿಯಾಗಿ ಚಿತ್ರದ ಕಥೆ ಹೇಳಿದ್ದು, ನಟಿ ಕೂಡ ಓಕೆ ಎಂದಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಘೋಷಣೆಯೊಂದೆ ಭಾಕಿ ಇದೆ.