ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರತಿ ಭಾರಿಯೂ ಒಂದಲ್ಲ ಒಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೆ ಹೊಸ ಅವತಾರದಲ್ಲಿ ಅಭಿಮಾನಿಗಳ ಕಣ್ಣಿಗೆ ದರ್ಶನ ಕೊಟ್ಟಿದ್ದಾರೆ. ಸೌತ್ ಮತ್ತು ಬಾಲಿವುಡ್ ನಟಿಯಾಗಿರುವ ರಶ್ಮಿಕಾ, ಖಾಸಗಿ ಇವೆಂಟ್ನಲ್ಲಿವೊಂದರಲ್ಲಿ ರ್ಯಾಂಪ್ ಮಾಕ್ ಮಾಡಿದ್ದು, ಸದ್ಯ ನಟಿಯ ಹೊಸ ಲುಕ್ ನೆಟ್ಟಿಗರ ಗಮನ ಸೆಳೆದಿದೆ.
ಬಾಲಿವುಡ್ ಗೆ ಎಂಟ್ರಿಕೊಟ್ಟ ಬಳಿಕ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ನಿಂದ ಪಡ್ಡೆಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.
ಮುಂಬೈನಲ್ಲಿ ನಡೆದ ಫ್ಯಾಷನ್ ವಿಕ್ ಇವೆಂಟ್ವೊಂದರಲ್ಲಿ ರಶ್ಮಿಕಾ ರ್ಯಾಂಪ್ ವಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಪ್ಪು ಬಣ್ಣ ಮಾಡ್ರನ್ ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದು ಸದ್ಯ ರಶ್ಮಿಕಾ ಹೊಸ ಫೋಟೋಸ್ ಇಂಟರ್ನೆಟ್ನಲ್ಲಿ ಸದ್ದು ಮಾಡ್ತಿದೆ.
ರ್ಯಾಂಪ್ ವಾಕ್ ನಲ್ಲಿ ರಶ್ಮಿಕಾ ಮಾತ್ರವಲ್ಲದೇ ಅಥಿಯಾ ಶೆಟ್ಟಿ, ತಾಪ್ಸಿ ಪನ್ನು, ಮಲೈಕಾ ಅರೋರಾ, ಪರಿಣಿತಿ ಚೋಪ್ರಾ ಸೇರಿದಂತೆ ಹಲವರು ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.