ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ಇಂದು ಶಾಕಿಂಗ್ ನ್ಯೂಸ್ ಕೇಳಿ ಬಂದಿದೆ. ಇದೇ ಮೊದಲ ಭಾರಿಗೆ ಡಾ.ರಾಜ್ ಕುಮಾರ್ ಫ್ಯಾಮಿಲಿಯಿಂದ ಜೋಡಿಯೊಂದು ದೂರ ದೂರವಾಗೋ ನಿರ್ಧಾರ ಮಾಡಿದ್ದಾರೆ.
ಯೆಸ್.ಸುಮಾರು 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮದುವೆಯಾದ ನಾಲ್ಕೇ ವರ್ಷಕ್ಕೆ ಯುವ ಹಾಗೂ ಶ್ರೀದೇವಿ ದೂರ ದೂರವಾಗೋ ನಿರ್ಧಾರ ಮಾಡಿದ್ದಾರೆ.
ಡಾ ರಾಜ್ಕುಮಾರ್ ಮೊಮ್ಮಗ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ಕುಮಾರ್ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದು, ಕಳೆದ 6 ತಿಂಗಳಿನಿಂದ ಯುವ ಹಾಗೂ ಶ್ರೀದೇವಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ.
ಶ್ರೀದೇವಿ ಭೈರಪ್ಪ ಅವರು ಮೂಲತಃ ಮೈಸೂರಿನವರು. ಅಲ್ಲೇ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಮುಗಿಸಿ, ಡಾ. ರಾಜ್ ಕುಮಾರ್ ಅವರ ಕುಟುಂಬ ನಡೆಸುತ್ತಿರುವ ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ ವಹಿಸಿಕೊಂಡಿದ್ದರು.
ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು.
ಯುವರಾಜ್ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಲಾಗಿದೆ. ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಸಂಸಾರದಲ್ಲಿ ಬಿರುಕು ಮೂಡಲ ಆ ಸ್ಯಾಂಡಲ್ವುಡ್ ನಟಿ ಕಾರಣಾನ ಎಂಬ ಪ್ರಶ್ನೆ ಎದುರಾಗಿದೆ.
ಸ್ಯಾಂಡಲ್ವುಡ್ನಲ್ಲಿ ಈ ನಟಿ ಖ್ಯಾತಿಯನ್ನು ಗಳಿಸಿದ್ದಾರೆ. ಕೇವಲ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ರು, ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
ಅಣ್ಣಾವ್ರ ಕುಟುಂಬದಿಂದ ಶ್ರೀದೇವಿ ಬೈರಪ್ಪ ಕಿರುಕುಳ ಅನುಭವಿಸಿದ್ರಾ ಎಂಬ ಬಗ್ಗೆ ಅವರ ತಂದೆ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ.
ಇನ್ನೂ ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇನ್ನೂ ಜೂನ್ 6 ರಂದು ಡಿವೋರ್ಸ್ ಕೋರಿ ಫ್ಯಾಮಿಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಕುಮಾರ್ ಅಕಾಡೆಮಿಯಲ್ಲಿ ಶ್ರೀದೇವಿ ಕೆಲಸ ಮಾಡುತ್ತಿದ್ದರು. ಇದೀಗ ಇಬ್ಬರು ಬೇರೆ ಬೇರೆಯಾಗುತ್ತಿದ್ದಾರೆ.
ಇನ್ನೂ ಮಗಳ ಬಗ್ಗೆ ಬೈರಪ್ಪನವರು ಕೆಲ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಯುವ ನನ್ನ ಜೊತೆ ಈ ಬಗ್ಗೆ ಏನೂ ಮಾತಾಡಿಲ್ಲ. ಇಲ್ಲಿಯವರೆಗೂ ನನ್ನ ಬಳಿ ಬಂದಿಲ್ಲ ಎಂದಿದ್ದಾರೆ.
ನನ್ನ ಮಗಳಿಕೆ ಕಿರುಕುಳ ಆಗಿದ್ದರೂ ಆಕೆ ನಾನು ನೊಂದುಕೊಳ್ಳುತ್ತೇನೆ ಅಂತ ಹೇಳಿಲ್ಲ ಎಂದು ಶ್ರೀದೇವಿ ತಂದೆ ಬೈರಪ್ಪ ಹೇಳಿದ್ದಾರೆ.