ದೊಡ್ಮನೆಯ ಕುಡಿ ಯುವ ರಾಜ್ಕುಮಾರ್ ಸಂಸಾರದ ಸಮಸ್ಯೆ ಬೀದಿಗೆ ಬೀದಿದೆ. ಪ್ರೀತಿಸಿ ಮದುವೆಯಾಗಿದ್ದ ಯುವ ಹಾಗೂ ಶ್ರೀದೇವಿ ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಚೇದನಕ್ಕೆ ಮುಂದಾಗಿದ್ದಾರೆ. 2019ರಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ ಈ ಜೋಡಿ ಜೀವನದಲ್ಲಿ ಬಿರುಗಾಳಿ ಎದ್ದಿದೆ.
ಯುವ ರಾಜ್ಕುಮಾರ್ ಜೂನ್ 6ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಶ್ರೀದೇವಿ ಬೈರಪ್ಪ ವಿಚ್ಛೇದನದ ಅರ್ಜಿಗೆ ಪ್ರತಿಕ್ರಿಯೆ ನೀಡಲ್ಲ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಶ್ರೀದೇವಿ ಬೈರಪ್ಪ ತಮ್ಮ ವಕೀಲ ಮುಖಾಂತರ ಡಿವೋರ್ಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರು ಪ್ರತಿಕ್ರಿಯೆ ನೀಡಿದ ರಿಪ್ಲೈ ನೋಟೀಸ್ ವೈರಲ್ ಆಗಿದೆ. ಇದರಲ್ಲಿ ಯುವರಾಜ್ ಕುಮಾರ್ ಪರ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ.
- ನಿಮ್ಮ ಕ್ಲೈಂಟ್ನ (ಯುವ ರಾಜ್ಕುಮಾರ್) ವರ್ತನೆಯಿಂದ ನಮ್ಮ ಕಕ್ಷಿದಾರದಾರು (ಶ್ರೀದೇವಿ ಬೈರಪ್ಪ) ಆಘಾತ ಹಾಗೂ ಸಂಕಟವನ್ನು ಅನುಭವಿಸಿದ್ದಾರೆ. ಇದು ತೀವ್ರ ಕಿರುಕುಳ ಮತ್ತು ಆಘಾತವನ್ನು ಉಂಟುಮಾಡಿದೆ. ನಮ್ಮ ಕಕ್ಷಿದಾರರು ನಿಮ್ಮ ಕ್ಲೈಂಟ್ನಿಂದ ಉಂಟಾದ ಎಲ್ಲಾ ಕಿರುಕುಳವನ್ನು ಅವರ ಕುಟುಂಬದೊಂದಿಗೆ ನಮಗೆ ತಿಳಿಸಿದ್ದಾರೆ. ನಮ್ಮ ಕಕ್ಷಿದಾರರು ನಿಮ್ಮ ಕ್ಲೈಂಟ್ ಅವರನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಅಲ್ಲದೆ 9 ವರ್ಷಗಳಿಂದ ನಿಮ್ಮ ಕಕ್ಷಿದಾರರ ಹಾಗೂ ಅವರ ಕುಟುಂಬದ ಹಿತಾಸಕ್ತಿಯನ್ನು ಕರ್ತವ್ಯದಿಂದ ಪೂರೈಸಿದ್ದಾರೆ. ತನ್ನ ವೈವಾಹಿಕ ಜೀವನದಲ್ಲಿ ಮಾನಸಿಕ ಕಿರುಕುಳ, ಆರ್ಥಿಕ ಹಾಗೂ ದೈಹಿಕ ಕಿರುಕುಳ, ದೌರ್ಜನ್ಯಗಳ ಹೊರತಾಗಿಯೂ, ಕುಟುಂಬದ ಹಿತಾಸಕ್ತಿಗಳನ್ನು ರಕ್ಷಿಸಲು ಸಲುವಾಗಿ ಅವರು ಯಾವಾಗಲೂ ಸಹಿಸಿಕೊಂಡಿದ್ದಾರೆ. ನಿಮ್ಮ ಕ್ಲೈಂಟ್ ಅವರ ಸಹ ನಟಿ ಸಪ್ತಮಿಗೌಡ ಅವರೊಂದಿಗೆ ಅಫೇರ್ ಇಟ್ಟುಕೊಂಡಿರುವುದು ಅವರು 2023, ಡಿಸೆಂಬರ್ನಲ್ಲಿ ಭೇಟಿ ಕೊಟ್ಟಿದ್ದಾಗ, ಸುಮಾರು ಒಂದು ವರ್ಷದಿಂದ ಇಂತಹ ಕೆಲಸದಲ್ಲಿ ತೊಡಗಿದ್ದಾರೆಂದು ಕುಟುಂಬ ಹಾಗೂ ಸ್ನೇಹಿತರಿಂದ ಬೆಳಕಿಗೆ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡುವ ಸಲುವಾಗ ನನ್ನ ಕಕ್ಷಿದಾರರ ವಿರುದ್ಧ ಕ್ರೂರವಾಗಿ ಲೀಗಲ್ ನೋಟಿಸ್ ಅನ್ನು ಕಳುಹಿಸಿದ್ದಾರೆ.
- 2023 ರ ಡಿಸೆಂಬರ್ನಲ್ಲಿ ನಮ್ಮ ಕ್ಲೈಂಟ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ನಿಮ್ಮ ಕ್ಲೈಂಟ್ನ ಬಗ್ಗೆ ಕಠೋರ ಸತ್ಯವನ್ನು ಮನಗಂಡು ಶಾಕ್, ಆಘಾತ, ಹತಾಶೆ ಮತ್ತು ಸಂಕಟಗೊಂಡಿದ್ದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ನಡುವೆ ನಮ್ಮ ಕಕ್ಷಿದಾರರು ನಿಮ್ಮ ಕ್ಲೈಂಟ್ನ ದುರ್ನಡತೆಯನ್ನು ತಿಳಿದುಕೊಳ್ಳುವ ಸಂದರ್ಭವನ್ನು ಎದುರಿಸಬೇಕಾಯಿತು. ಮಾನಸಿಕ ಮತ್ತು ದೈಹಿಕ ಕಿರುಕುಳ, ಆರ್ಥಿಕ ನಿರ್ಬಂಧದ ನಿಂದನೆಯನ್ನು ಎದುರಿಸಬೇಕಾಯಿತು. ಪ್ರೇಯಸಿ, ಸಪ್ತಮಿ ಗೌಡ ಅವರು ನಮ್ಮ ಕ್ಲೈಂಟ್ ಮದುವೆ ಆಗಿರುವ ಮನೆಗೆ ಪ್ರವೇಶ ನೀಡಿದಾಗ, ನಮ್ಮ ಕಕ್ಷಿದಾರರನ್ನು ಅವರು ವಿವಾಹವಾಗಿ ಹೋದ ಮನೆಯಿಂದ ಹೊರಹಾಕಲು ಪ್ರಯತ್ನಿಸುವ ಮಟ್ಟಿಗೆ ನಡೆದಿತ್ತು. ನಿಮ್ಮ ಕಕ್ಷಿದಾರರ ಕುಟುಂಬದೊಳಗೆ ಇದ್ದಾಗ, ನಮ್ಮ ಕ್ಲೈಂಟ್ ಆ ಕುಟುಂಬದಿಂದ ಕ್ರೌರ್ಯವನ್ನು ಎದುರಿಸಿದ್ದಾರೆ. ಆದರೆ ನಮ್ಮ ಕ್ಲೈಂಟ್ ವಿರುದ್ಧ ಮಾಡಲಾದ ನಿಮ್ಮ ಆರೋಪಗಳಿಗೆ ಎರಡೂ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪ್ರತಿಕ್ರಿಯೆಗಳನ್ನು ನೀಡಲು ನಿರ್ಬಂಧಿಸಲು ಬಯಸುತ್ತೇವೆ.
ಆದಾಗ್ಯೂ, ಸೂಕ್ತ ಸಮಯ, ಸ್ಥಳ ಮತ್ತು ನ್ಯಾಯವ್ಯಾಪ್ತಿಯಲ್ಲಿ ಅಗತ್ಯವಿರುವಾಗ ಮತ್ತು ನಿಮ್ಮ ಕ್ಲೈಂಟ್ ವಿರುದ್ಧ ಅಂತಹ ಹಕ್ಕುಗಳು ಹಾಗೂ ಆರೋಪಗಳನ್ನು ಮಾಡುವುದಕ್ಕೆ ನಮ್ಮ ಹಕ್ಕುಗಳನ್ನು ಕಾಯ್ದಿರಿಸಲು ನಾವು ಬಯಸುತ್ತೇವೆ.
- ಯುವ ರಾಜ್ಕುಮಾರ್ ವಿವಾಹವಾಗುವ ಸಂದರ್ಭದಲ್ಲಿ ನಿರುದ್ಯೋಗಿಯಾಗಿದ್ದರು. ಭವಿಷ್ಯದ ಬಗ್ಗೆ ಫೋಕಸ್ ಇರಲಿಲ್ಲ. ಮದುವೆ ಆಗುವ ವೇಳೆ ಯುವ ರಾಜ್ಕುಮಾರ್ ಅವರ ವೃತ್ತಿ ಬದುಕಿನಲ್ಲಿ ಸ್ಥಿರತೆಯನ್ನು ತರುವಂತೆ ಕೇಳಿಕೊಂಡಿದ್ದರು ಎಂದು ಹೇಳದ್ದಾರೆ. ಹಾಗೇ ಮದುವೆಯನ್ನು ಇಂತಹದ್ದೇ ಸ್ಥಳದಲ್ಲಿ ಅದ್ದೂರಿಯಾಗಿ ಮಾಡಕೊಡಬೇಕು ಎಂದು ಒತ್ತಡ ಹಾಕಿದ್ದರು. ಅಲ್ಲದೆ ಆ ಮದುವೆಯಲ್ಲಿ 10 ಸಾವಿರ ಮಂದಿ ಭಾಗವಹಿಸಿದ್ದರು. ಇದರಿಂದ ಸಾಕಷ್ಟು ಹಣ ಖರ್ಚಾಗಿತ್ತು ಎಂದು ಎಂದಿದ್ದಾರೆ.
ಯುವ ರಾಜ್ಕುಮಾರ್ ನೀಡಿದ ಲೀಗಲ್ ನೋಟೀಸ್ಗೆ ಶ್ರೀದೇವಿ ವಕೀಲರ ಮೂಲಕ ನೀಡಿದ ರಿಪ್ಲೈ ನೋಟೀಸ್ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಇನ್ನೂ 7 ಅಂಶಗಳ ದೊಡ್ಡ ಆರೋಪಗಳ ಪಟ್ಟಿನೇ ಇದೆ.