ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಲದೇವನಹಳ್ಳಿ ಗ್ರಾಮದ ಮಾರಮ್ಮ ದೇವಿಯ ದೇವಸ್ಥಾನಕ್ಕೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ದೇವಿಯ ಕೊರಳಲಿದ್ದ ತಾಳಿ ಸಹಿತ ಲಕ್ಷಾಂತರ ಹಣವಿದ್ದ 2 ಹುಂಡಿ ಕಳ್ಳತನ ಮಾಡಿ ಸಿ ಸಿ ಕ್ಯಾಮರಾದ ಡಿವಿಆರ್ ಕೂಡ ಹೊತ್ತೋಯ್ದಿದ್ದಾರೆ.
ಇನ್ನೂ ಸಾವಿರಾರು ಭಕ್ತರನ್ನು ಹೊಂದಿರುವ ಈ ಮಾರಮ್ಮ ದೇವಿಯ ದೇವಸ್ಥಾನ ಕಳೆದ 4 ತಿಂಗಳ ಹಿಂದಸ್ಟೆ 45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪುನರ್ ನಿರ್ಮಾಣವಾಗಿದ್ದು ಅದ್ದೂರಿ ಜೀರ್ನೋದ್ದಾರ ಮತ್ತು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾತ್ರೆ ಕೂಡ ನಡೆದಿತ್ತು ಈ ಹಿನ್ನಲೆ ಲಕ್ಷಾಂತರ ಹಣ ಕೂಡ 2 ಹುಂಡಿಗಳಲ್ಲಿ ಕ್ರೂಡಿಕರಣವಾಗಿತ್ತು .ಸದ್ಯ ಈ ದೇವಸ್ಥಾನ
ಕಳ್ಳತನವಾಗಿರುವುದು ಭಕ್ತರು ಹಾಗೂ ಸೋಲದೇವನಹಳ್ಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು ನೆಲಮಂಗಲ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.