ಸಮಗ್ರ ಮನೆಮದ್ದುಗಳು ಹೊಟ್ಟೆ ಉಬ್ಬರ ನಿವಾರಣೆ ಮಾಡಲು ಸಹಕಾರಿ ಆಗತ್ತೆ. ಇದನ್ನು ಹೊಟ್ಟೆಯ ಗ್ಯಾಸ್ ಕಡಿಮೆ ಮಾಡಲು ಯಾವ ರೀತಿ ಬಳಸಬಹುದಾಗಿದೆ.
ಹೊಟ್ಟೆಯು ತುಂಬಿದಂತೆ, ಬಿಗಿಯಾಗಿ ಅಥವಾ ಅಹಿತಕರ ವೆಂದು ಅನಿಸುತ್ತಿದ್ದರೆ, ಆಗ ಇದನ್ನು ಹೊಟ್ಟೆ ಉಬ್ಬರ ಅಥವಾ ಹೊಟ್ಟೆಯ ಗ್ಯಾಸ್ ಎಂದು ಕರೆಯಲಾಗುತ್ತದೆ.
ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಅತಿಯಾಗಿ ಗ್ಯಾಸ್ ನಿರ್ಮಾಣಗೊಂಡ ಪರಿಣಾಮ ವಾಗಿ ಹೀಗೆ ಆಗುವುದು.
ಹೊಟ್ಟೆ ಉಬ್ಬರವು ಹಲವಾರು ಕಾರಣಗಳಿಂದ ಸಂಭವಿಸ ಬಹುದು. ಮುಖ್ಯವಾಗಿ ಆಹಾರದ ಅಭ್ಯಾಸಗಳು ಮತ್ತು ಅಜೀರ್ಣದಿಂದ ಹಾಗೂ ಚಟುವಟಿಕೆ ಇಲ್ಲದೆ ಇರುವ ಜೀವನ ಶೈಲಿಯು ಇದಕ್ಕೆ ಕಾರಣವಾಗುವುದು
ಹೊಟ್ಟೆ ಉಬ್ಬರವು ಯಾವಾಗಲೊಮ್ಮೆ ಆಗುತ್ತಲಿದ್ದರೆ, ಆಗ ಇದು ಸಾಮಾನ್ಯ. ಆದರೆ ತೀವ್ರವಾಗಿದ್ದರೆ ಅಥವಾ ನಿರಂತರವಾಗಿ ಇದು ಕಾಡುತ್ತಲಿದ್ದರೆ, ಆಗ ಈ ಬಗ್ಗೆ ಗಮನಹರಿಸಬೇಕು ಮತ್ತು ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಔಷಧಿ ಪಡೆಯಬೇಕು.
ಸಕ್ಕರೆ, ಹಾಲು ಹಾಕದೆ ಶುಂಠಿ ಚಹಾ:-
ಶುಂಠಿಯು ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಆಗಿದೆ. ಇದು ಗ್ಯಾಸ್ ಉತ್ಪತ್ತಿಯನ್ನು ಬಿಡುಗಡೆ ಮಾಡು ವುದು ಮತ್ತು ಹೊಟ್ಟೆ ಉಬ್ಬರ ನಿವಾರಿಸು ವುದು. ಶುಂಠಿಯನ್ನು ವಿವಿಧ ರೀತಿಯಿಂದ ಸೇವನೆ ಮಾಡಬಹುದು.
ತಾಜಾ ಶುಂಠಿ ಚಹಾ, ಶುಂಠಿ ಹುಡಿ ಮತ್ತು ಆಹಾರದಲ್ಲಿ ಶುಂಠಿ ಬಳಕೆಯಿಂದ ಹೊಟ್ಟೆ ಉಬ್ಬರ ನಿವಾರಿಸ ಬಹುದು. ಬ್ಲ್ಯಾಕ್ ಟೀಗೆ ತಾಜಾ ಶುಂಠಿಯನ್ನು ಜಜ್ಜಿಕೊಂಡು ಹಾಕಿದರೆ ಆಗ ಇದು ಹೊಟ್ಟೆ ಉಬ್ಬರದಿಂದ ಪರಿಹಾರ ನೀಡುವುದು.
ನೀರಿನಲ್ಲಿ ನೆನೆಸಿದ ಓಮಕಾಳು
ಬೆಳಗ್ಗೆ ಕಾಡುತ್ತಿರುವ ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿವಾರಣೆ ಮಾಡಲು ಅದ್ಭುತವಾದ ಮನೆಮದ್ದು ಎಂದರೆ ಅದು ಓಮಕಾಳು ನೆನೆಸಿಟ್ಟಿರುವ ನೀರು. ಜೀರ್ಣಕ್ರಿಯೆ ಸಮಸ್ಯೆಯಾದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ನ್ನು ನಿವಾರಣೆ ಮಡಲು ಓಮ ಕಾಳು ತುಂಬಾ ಪರಿಣಾಮಕಾರಿ ಆಗಿದೆ.
ತ್ರಿಫಲ
ನೆಲ್ಲಿಕಾಯಿ, ಹರಿತಕಿ ಮತ್ತು ಬಿಭಿತಕಿ ಎನ್ನುವ ಮೂರು ಹಣ್ಣು ಗಳಿಂದ ಮಾಡಲ್ಪಟ್ಟಿರುವಂತಹ ತ್ರಿಫಲವು ಜೀರ್ಣಕ್ರಿಯೆಗೆ ತುಂಬಾ ಪರಿಣಾಮ ಕಾರಿ ಆಗಿದೆ.
ತ್ರಿಫಲವು ಕರುಳಿನ ಕ್ರಿಯೆ ಸರಾಗವಾಗಿಸುವುದು, ಜೀರ್ಣ ಕ್ರಿಯೆ ಸುಧಾರಣೆ ಮಾಡುವುದು ಮತ್ತು ಹೊಟ್ಟೆ ಉಬ್ಬರ ತಡೆಯುವುದು. ತ್ರಿಫಲ ಹುಡಿಯನ್ನು ನೀರಿಗೆ ಹಾಕಿಕೊಂಡು ಸೇವಿಸಿದರೆ ಆಗ ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಗ್ಯಾಸ್ ಸಮಸ್ಯೆ ದೂರ ಮಾಡುವುದು
ಪುದೀನಾ ಚಹಾ:
ಬೇಸಗೆಯನ್ನು ಹಲವಾರು ಬಗೆಯ ಪಾನೀಯಗಳಲ್ಲಿ ಬಳಕೆ ಮಾಡಲ್ಪ ಡುವಂತಹ ಪುದೀನಾವು ಹೊಟ್ಟೆಯ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ನಿವಾರಣೆ ಮಾಡಲು ಸಹಕಾರಿ ಆಗಿದೆ.
ಇದನ್ನು ಆಯುರ್ವೇದದಲ್ಲೂ ಬಳಕೆ ಮಾಡಿಕೊಂಡು ಬರಲಾಗಿದೆ. ಇದರಲ್ಲಿ ಇರುವ ತಂಪುಕಾರಕ ಮತ್ತು ಶಮನಕಾರಿ ಗುಣವು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು.
ಈ ಆಯುರ್ವೇದಿಕ್ ಮನೆಮದ್ದುಗಳನ್ನು ಬಳಸಿಕೊಂಡರೆ, ಆಗ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ದೇಹಕ್ಕೆ ಆಗದು. ಆದರೆ ನಿರಂತರ ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಕಡೆಗಣಿಸಬಾರದು.