ನಮಗೆ ಮದುವೆಯಾಗಿ ಒಂದು ವರ್ಷವಾಗಿದೆ. ಈಗ ನಾನು ತಾಯಿ ಆಗ್ತಿದ್ದೀನಿ. ನಂಗೆ ಮುಂದೆ ಹುಟ್ಟೋ ಮಗು ಅಪ್ಪ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು? ಮೊನ್ನೆ ನನಗೆ ಕರೆ ಮಾಡಿ ಮಾತನಾಡಿದ್ದೇ ಕೊನೆ ಆಗೋಯ್ತು. ನನ್ನ ಮತ್ತು ನನ್ನ ಮುಂದಿನ ಜೀವನ ಹೇಗೆ ಎಂದು ದರ್ಶನ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣೀರಿಟ್ಟಿದ್ದಾರೆ.
ನಮ್ಮನೆಯವರು ದರ್ಶನ್ ಅವರ ಅಭಿಮಾನಿ ಆಗಿರಲಿಲ್ಲ. ದರ್ಶನ ಮೇಲೆ ಆರೋಪ ಬಂದಿರೋದಕ್ಕೆ ನ್ಯಾಯ ಕೊಡಿಸಲು ಜನ ಇದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ? ಮುಂದೆ ಈ ಮಗುವಿಗೆ ಯಾರು ಬರ್ತಾರೆ? ನಮಗೆ ನ್ಯಾಯ ಬೇಕು ಎಂದು ಮೃತ ರೇಣುಕಾಸ್ವಾಮಿ ಅವರ ಪತ್ನಿ ಸಹನಾ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ.
ಇನ್ನೂ ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಭೇಟಿ ಮಾಡಿದ ಭಾವನಾ ಬೆಳಗೆರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅವರ ಪತ್ನಿ ನೋಡಿ ನನ್ನ ಕಣ್ಣಲ್ಲೇ ನೀರು ಬಂತು. ಅವರ ಪತ್ನಿ ಸಂಪೂರ್ಣವಾಗಿ ಬ್ಲಾಂಕ್ ಆಗಿದ್ದಾರೆ. ತುಂಬಾ ಎಂಗ್ ಇದ್ದಾರೆ, ಅದರಲ್ಲಿಯೂ ಐದು ತಿಂಗಳ ಗರ್ಭಿಣಿ ಅವರು. ಅವರ ಹೆಂಡತಿ ತುಂಬಾ ಮುಗ್ಧರು ತುಂಬಾ ನೊಂದು ಕೊಂಡಿದ್ದಾರೆ. ಏನಾಗುತ್ತಿದೆ ಎಂಬುದು ಅವರಿಗೆ ಇನ್ನು ಗೊತ್ತಾಗಿಲ್ಲ. ಪವಿತ್ರ ದರ್ಶನ ಅವರು ಅರೆಸ್ಟ್ ಆಗಿದ್ದಾರೆ ಎಂಬುದು ಗೊತ್ತಾಗಿದೆ. ಅವರ ಮನೆ ಪರಿಸ್ಥಿತಿ ನೋಡಿ ತುಂಬಾ ಬೇಜಾರಾಯ್ತು ಎಂದು ಹೇಳಿದರು.
ಮೃತಪಟ್ಟಿರುವ ಹುಡುಗ ರೇಣುಕಾಸ್ವಾಮಿ ಮನೆಯಲ್ಲಿ 97 ವರ್ಷದ ಅವರ ಅಜ್ಜಿ ಇದ್ದಾರೆ. ಅವರಿಗೆ ಏನಾಗಿದಿಯೋ ಗೊತ್ತಿಲ್ಲ. ಇನ್ನೊಂದು ಅಜ್ಜಿ ಇದ್ದು ಅವರು ಮೊಮ್ಮಗ ಗುಣವಾಗಿ ಬರುತ್ತಾನೆ ಅಂತಾ ಹೇಳ್ತಾ ಇದ್ದಾರೆ. ಬೆಂಗಳೂರಲ್ಲಿ ಮೊಮ್ಮಗ ಕೊಲೆಯಾಗಿರುವ ವಿಷ್ಯ ಅವರ ಅಜ್ಜಿಯವರಿಗೆ ಗೊತ್ತಾಗಿಲ್ಲ. ಇನ್ನು ಅವನು ತುಂಬಾ ಅಮಾಯಕ ಅವನು ದರ್ಶನ ಅಭಿಮಾನಿ ಅಲ್ಲ, ಅವನ ಪಾಲೋಯಿರ್ ಕೂಡ ಅಲ್ಲ. ಡ್ಯೂಟಿಗೆ ಹೋದವನು ಇನ್ನು ಬಂದಿಲ್ಲ. ಅವನು ಪೋನ್ ಮಾಡಿದ್ದಾಗ ಅವರ ಪತ್ನಿ ರಿಸಿವ್ ಮಾಡಿಲ್ಲ. ಪತ್ನಿ ಪೋನ್ ಮಾಡಿದಾಗ ಅವನು ರೀಸಿವ್ ಮಾಡಿಲ್ಲ. ಪೇಸ್ ಬುಕ್ ಹಾಗೂ ಪವಿತ್ರಾಗೌಡಗೆ ಮೆಸೇಜ್ ಮಾಡಿದ್ದ ಬಗ್ಗೆ ಮನೆಯವರಿಗೆ ಏನು ಗೊತ್ತಿಲ್ಲ. ಇನ್ನು ಪರ್ಸನಲ್ ಕಾಮೆಂಟ್ ಗೆ ಸೈಬರ್ ಕ್ರೈಮ್ ಇದೆ. ಪ್ರಾಣ ತೆಗೆಯುವ ಮಟ್ಟಕ್ಕೆ ಸೋಷಿಯಲ್ ಮೀಡಿಯಾ ಹೋಗುತ್ತಿದೆ. ಈ ಕೊಲೆ ಪ್ರಕರಣ ಶೇಮ್ಫುಲ್ ಬಿಹೇವಿಯರ್ ಆಗಿದೆ. ಯಾವ ಅಭಿಮಾನಿಯೂ ಕೂಡ ಸಾವು ಬಯೋಸೋದು ಇಲ್ಲ. ನಟ ದರ್ಶನ ಹೊಡಿರಿ ಅಂತಾ ಹೇಳಿದ್ದರೂ, ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಭಾವನಾ ಬೆಳಗೆರೆ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.